-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
MRPL cautioned malicious fraud- ಎಂಆರ್‌ಪಿಎಲ್ ಹೆಸರು ಬಳಸಿ ವಂಚನೆ: ವಂಚಕರ ಜಾಲದ ಬಗ್ಗೆ ಕಂಪೆನಿ ಎಚ್ಚರಿಕೆಯ ಸಂದೇಶ

MRPL cautioned malicious fraud- ಎಂಆರ್‌ಪಿಎಲ್ ಹೆಸರು ಬಳಸಿ ವಂಚನೆ: ವಂಚಕರ ಜಾಲದ ಬಗ್ಗೆ ಕಂಪೆನಿ ಎಚ್ಚರಿಕೆಯ ಸಂದೇಶ

ಎಂಆರ್‌ಪಿಎಲ್ ಹೆಸರು ಬಳಸಿ ವಂಚನೆ: ವಂಚಕರ ಜಾಲದ ಬಗ್ಗೆ ಕಂಪೆನಿ ಎಚ್ಚರಿಕೆಯ ಸಂದೇಶ






ಎಂಆರ್‌ಪಿಎಲ್ ಹೆಸರನ್ನು ಬಳಸಿ ಕಂಪೆನಿ ಹೆಸರನ್ನು ಕೆಡಿಸುವ ಮತ್ತು ಅದರ ಮೂಲಕ ಜನರನ್ನು ವಂಚಿಸುವ ಜಾಲವೊಂದು ಸಕ್ರಿಯವಾಗಿದೆ. ಈ ಬಗ್ಗೆ ಸ್ವತಃ ಎಂಆರ್‌ಪಿಎಲ್ ಕಂಪೆನಿ ಪ್ರಕಟಣೆ ನೀಡಿದ್ದು, ಎಂಆರ್‌ಪಿಎಲ್ ಹೆಸರನ್ನು ಬಳಸಿ ನಡೆಯುತ್ತಿರುವ ಮಹಾ ವಂಚನೆಗೆ ಯಾರೂ ಬಲಿಬೀಳಬಾರದು ಎಂದು ಎಚ್ಚರಿಕೆಯ ಸಂದೇಶ ನೀಡಿದೆ.



ಎಂಆರ್‌ಪಿಎಲ್ ಕಂಪೆನಿಯ ಆಡಳಿತ ನಿರ್ದೇಶಕರ ಹೆಸರನ್ನು ಬಳಸಿ ಉದ್ಯೋಗಿಗಳನ್ನು ತಪ್ಪು ದಾರಿಗೆಳೆಯುವ ಪ್ರಯತ್ನವೊಂದು ಕಂಪೆನಿಯ ಗಮನಕ್ಕೆ ಬಂದಿದೆ. ಕೆಲವೊಂದು ವಂಚಕರು ಎಂಆರ್‌ಪಿಎಲ್ ಎಂ.ಡಿ. ಎಂದು ಹೇಳಿಕೊಂಡು ನೌಕರರಿಗೆ ಇಮೇಲ್ ಸಂದೇಶವನ್ನು ಕಳಿಸಿದ್ದಾರೆ.



ಇದರಲ್ಲಿ ಎಂಆರ್‌ಪಿಎಲ್ ತನ್ನ 141 ನೌಕರರರ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ಮತ್ತು ಎಚ್ಚರಿಕೆಯ ಸಂದೇಶ ಬಿಡುಗಡೆ ಮಾಡಿರುವ ಎಂಆರ್‌ಪಿಎಲ್‌ ಇಂತಹ ತಪ್ಪುದಾರಿಗೆಳೆಯುವ ಸಂದೇಶಕ್ಕೆ ಸೊಪ್ಪು ಹಾಕದಂತೆ ಮನವಿ ಮಾಡಿದೆ.



ಈ ಹಿಂದೆ, ಇಂತಹದ್ದೇ ನಕಲಿ ಸಂದೇಶ ಬಳಸಿಕೊಂಡು ಎಂಆರ್‌ಪಿಎಲ್ ಕಂಪೆನಿಯಲ್ಲಿ ಉದ್ಯೋಗ ಕೊಡಿಸುವ ಜಾಲವೊಂದು ಸಕ್ರಿಯವಾಗಿತ್ತು.



ಎಂಆರ್‌ಪಿಎಲ್ ತನ್ನ ಡೊಮೈನ್ "@mrpl.co.in" ನಲ್ಲಿ ಸಂವಹನ ಮತ್ತು ಕಾರ್ಯನಿರ್ವಹಣೆ ಮಾಡುತ್ತಿದೆ. ಇದನ್ನು ಹೊರತುಪಡಿಸಿ ಬೇರಾವುದೇ ಡೊಮೈನ್ ಬಳಕೆ ಮಾಡುತ್ತಿಲ್ಲ. ಸಾರ್ವಜನಿಕರು ಮತ್ತು ಕಂಪೆನಿಯ ನೌಕರರು ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದೆ.

Ads on article

Advertise in articles 1

advertising articles 2

Advertise under the article

ಸುರ