
Mangaluru: ವಾರದ ಹಿಂದೆಯಷ್ಟೇ ವಿವಾಹ ಬಂಧನಕ್ಕೆ ಸಿಲುಕಿದ್ದ ನವವಿವಾಹಿತ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
11/06/2021 10:32:00 PM
ಮಂಗಳೂರು: ದಾಂಪತ್ಯ ಜೀವನಕ್ಕೆ ವಾರದ ಹಿಂದೆಯಷ್ಟೇ ಕಾಲಿಟ್ಟು ಸವಿಗನಸು ಕಾಣಬೇಕಿದ್ದ ಯುವಕನೋರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಪತ್ತೆಯಾಗಿದ್ದಾನೆ.
ಈತನ ಮೃತದೇಹ ಉಪ್ಪಿನಂಗಡಿ ಸಮೀಪದ ಕುದ್ರಡ್ಕ ಎಂಬಲ್ಲಿ ಪತ್ತೆಯಾಗಿದೆ. ಕುದ್ರಡ್ಕದ ಸುಲೈಮಾನ್ ಎಂಬವರ ಪುತ್ರ ನಾಸಿರ್(27) ಮೃತ ದುರ್ದೈವಿ.
ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ನಾಸಿರ್ ಕಳೆದ ವಾರವಷ್ಟೇ ವಿವಾಹವಾಗಿದ್ದರು. ನಾಸಿರ್ ಈ ಹಿಂದೆ ನರ ದೌರ್ಬಲ್ಯದಿಂದ ಬಳಲುತ್ತಿದ್ದರು. ಅದಕ್ಕೆ ಚಿಕಿತ್ಸೆಯನ್ನು ಪಡೆದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮಹಜರು ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಪುಂಜಾಲುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.