-->
ಡ್ರಗ್ಸ್ ಅಮಲಿನಲ್ಲಿ ತಾಯಿ ಮೇಲೆ ರೇಪ್ ಮಾಡಿದ ಮಗ

ಡ್ರಗ್ಸ್ ಅಮಲಿನಲ್ಲಿ ತಾಯಿ ಮೇಲೆ ರೇಪ್ ಮಾಡಿದ ಮಗ

ಘಾಜಿಯಾಬಾದ್ : ಡ್ರಗ್ಸ್ ಅಮಲಿನಲ್ಲಿ ಪುತ್ರನೇ ತನ್ನ ತಾಯಿಯ ಮೇಲೆ ಅತ್ಯಾಚಾರ ಎಸಗಿದ ಹೀನಕೃತ್ಯ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ . 

ದೀಪಾವಳಿಯ ಹಿಂದಿನ ರಾತ್ರಿ ಈ ಕಾಮುಕ ಡ್ರಗ್ಸ್ ಅಮಲಿನಲ್ಲಿ  ಕೊಳೆಗೇರಿಯಲ್ಲಿರುವ ಮನೆಗೆ ಬಂದು ತಾಯಿಯ ಅತ್ಯಾಚಾರ ವೆಸಗಿದ್ದಾನೆ.

ಈತ ತನ್ನ ತಾಯಿಯ ಕತ್ತಿನ ಮೇಲೆ ಚಾಕು ಇಟ್ಟು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬಲವಂತ ಮಾಡಿದ್ದ . ಆಕೆ ಪ್ರತಿರೋಧ  ತೋರಿಸಿದಷ್ಟೂ ಸಿಟ್ಟಿಗೆದ್ದು ಸಹಕರಿಸದೇ ಇದ್ದರೆ ಕತ್ತು ಸೀಳುವುದಾಗಿ ಬೆದರಿಕೆಯನ್ನು ಹಾಕಿದ್ದ . ಹೀಗಾಗಿ  ಮಹಿಳೆ ಪುತ್ರನಿಗೆ ಶರಣಾಗಬೇಕಾಯಿತು . 

ಮಗನಿಂದ ತಪ್ಪಿಸಿಕೊಂಡು ತಿಲಾ ಮೋರ್ ಪೊಲೀಸ್ ಠಾಣೆ ತಲುಪಿದ ಸಂತ್ರಸ್ತ‌ಮಹಿಳೆ ಮಗನ ದುಷ್ಕೃತ್ಯದ ಕುರಿತು ಮಾಹಿತಿ ನೀಡಿದ್ದಾರೆ. ಅಷ್ಟೊತ್ತಿಗೆ ಪರಾರಿಯಾಗಿದ್ದ ಆರೋಪಿಯನ್ನು ಮರುದಿನದಂದು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ .

Ads on article

Advertise in articles 1

advertising articles 2

Advertise under the article