-->
ಕಾರಿಂಜದಲ್ಲಿ ಅನ್ಯಮತೀಯ ಯುವಕರಿಂದ ಚಪ್ಪಲಿ ಹಾಕಿ ಪ್ರವೇಶ ವಿಚಾರದಲ್ಲಿ ಮುಂದುವರಿದ ಕಮೆಂಟ್ ಸಮರ-  ಪ್ರವಾದಿ ನಿಂದನೆಗೈದ ಯುವಕನ ಮೇಲೆ ದೂರು ದಾಖಲು

ಕಾರಿಂಜದಲ್ಲಿ ಅನ್ಯಮತೀಯ ಯುವಕರಿಂದ ಚಪ್ಪಲಿ ಹಾಕಿ ಪ್ರವೇಶ ವಿಚಾರದಲ್ಲಿ ಮುಂದುವರಿದ ಕಮೆಂಟ್ ಸಮರ- ಪ್ರವಾದಿ ನಿಂದನೆಗೈದ ಯುವಕನ ಮೇಲೆ ದೂರು ದಾಖಲು


ಮಂಗಳೂರು: ಇತ್ತೀಚೆಗೆ ಬಂಟ್ವಾಳದ ಕಾರಿಂಜ ದೇವಸ್ಥಾನದಲ್ಲಿ ಅನ್ಯಮತೀಯ ಯುವಕರು ಚಪ್ಪಲಿ ಹಾಕಿ ಪ್ರವೆಶಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ನಿಂದನೆಗೈದ ಯುವಕನ ಮೇಲೆ ದೂರು ದಾಖಲಾಗಿದೆ.


ಕಾರಿಂಜೇಶ್ವರ ದೇವಸ್ಥಾನದಲ್ಲಿ ಯುವಕರು ಚಪ್ಪಲಿ ಹಾಕಿ ಪ್ರವೆಶ ಮಾಡಿ ಧಾರ್ಮಿಕ ನಂಬುಗೆಗೆ ಧಕ್ಕೆ ತಂದ ವಿಚಾರದಲ್ಲಿ ಚರ್ಚೆಗಳು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದರು.  ಯುವಕರ ವರ್ತನೆ ಬಗ್ಗೆ ಸಾಮಾಜಿಕ ಜಲತಾಣದಲ್ಲಿ ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರವಾದಿ ನಿಂದನೆ ಮಾಡುವ ಪದಗಳನ್ನು ಬಳಸಲಾಗಿದೆ.

ಸುಳ್ಯ ತಾಲೂಕಿನ ಐವರನಾಡು ಗ್ರಾಮದ ಜಗದೀಶ ಎಂಬಾತ ಪ್ರವಾದಿಯನ್ನು ನಿಂದಿಸಿ ಕಮೆಂಟ್ ಮಾಡಿದ್ದನು. ಈ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ನೌಫಲ್ ಎಂಬವರು ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

Ads on article

Advertise in articles 1

advertising articles 2

Advertise under the article