ಪುತ್ತೂರು:18 ವರ್ಷ ತುಂಬುವ ವೇಳೆ ಅಪ್ರಾಪ್ತ ಬಾಲಕಿಯ ಮದುವೆಯಾಗುವ ಭರವಸೆ ನೀಡಿದ ಯುವಕನಿಂದಲೆ ರಾತ್ರಿ ಕದ್ದು ಮುಚ್ಚಿಬಂದು ಅತ್ಯಾಚಾರ- ಪ್ರಕರಣ ದಾಖಲು

 


ಮಂಗಳೂರು: ಅಪ್ರಾಪ್ತ ಬಾಲಕಿಯೊಬ್ಬಳನ್ನು 18 ವರ್ಷವಾದೊಡನೆ ಮದುವೆಯಾಗುವ ಭರವಸೆ ನೀಡಿದ ಯುವಕನೊಬ್ಬ ಆಕೆ ಮನೆಯಲ್ಲಿದ್ದಾಗ ಕದ್ದು ಮುಚ್ಚಿ ಬಂದು ಆಕೆಯನ್ನು ಅತ್ಯಾಚಾರವೆಸಗಿದ ಘಟನೆ  ನಡೆದಿದ್ದು ಈ ಬಗ್ಗೆ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಕೊರೊನಾ ಸಂದರ್ಭದಲ್ಲಿ ಈ ಬಾಲಕಿ ಕೇರಳದ ಕಾಸರಗೋಡಿನಲ್ಲಿ ಇದ್ದಳು. ಈ ಸಂದರ್ಭದಲ್ಲಿ  ಕಾಸರಗೋಡು ವಿದ್ಯಾನಗರದ ಜುಬೈರ್ ಎಂಬಾತ  ಈಕೆಯ ತಾಯಿಯಲ್ಲಿ ಮದುವೆ ಮಾಡಿಕೊಡುವಂತೆ ಭಿನ್ನವಿಸಿದ್ದ.  ಅದಕ್ಕೆ ಆಕೆಯ ತಾಯಿ 18 ವರ್ಷ ತುಂಬಿದ ಬಳಿಕ ಮದುವೆ ಮಾಡಿಕೊಡುವುದಾಗಿ ತಿಳಿಸಿದ್ದರು.

 

ಆ ಬಳಿಕ ಜುಬೈರ್ ಬಾಲಕಿಯೊಂದಿಗೆ ಪೋನ್ ನಲ್ಲಿ ಸಂಪರ್ಕವಿದ್ದ. ಬಾಲಕಿ ಪುತ್ತೂರಿನಲ್ಲಿದ್ದ ಸಂದರ್ಭದಲ್ಲಿ  ಅಲ್ಲಿಗೆ ಬಂದ ಜುಬೈರ್ ಆಕೆಗೆ ಮೆಸೆಜ್ ಮಾಡಿ  ಬಾಗಿಲು ತೆಗೆಯುವಂತೆ ಒತ್ತಾಯಿಸಿದ್ದ. ಬಳಿಕ  ಆಕೆಯ ಇಚ್ಚೆಗೆ ವಿರುದ್ದವಾಗಿ ದೈಹಿಕ ಸಂಪರ್ಕ ಬೆಳೆಸಿ ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿದ್ದಾನೆ

 

ಜುಬೈರ್ ಇನ್ನು ಮುಂದಕ್ಕೂ ಮನೆಗೆ ಬರುವುದಾಗಿ ತಿಳಿಸಿದ್ದು ಇದಕ್ಕೆ ಬಾಲಕಿ ಒಪ್ಪದೆ ಇದ್ದಾಗ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವಿಚಾರ ತಿಳಿದುಕೊಂಡ ತಾಯಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಜುಬೈರ್ ವಿರುದ್ದ ದೂರು ದಾಖಲಿಸಿದ್ದಾರೆ