-->
1000938341
ಮಾಜಿ ಸೈನಿಕನ ಮನೆಯ ಬಳಿ 40 ವರ್ಷಗಳ ಹಿಂದಿನ ಗ್ರೇನೈಡ್ ನಂತಹ ವಸ್ತುಗಳು ಪತ್ತೆ: ಎಲ್ಲಿಂದ ಬಂದಿದೆ ಎಂಬುದೇ ನಿಗೂಢ

ಮಾಜಿ ಸೈನಿಕನ ಮನೆಯ ಬಳಿ 40 ವರ್ಷಗಳ ಹಿಂದಿನ ಗ್ರೇನೈಡ್ ನಂತಹ ವಸ್ತುಗಳು ಪತ್ತೆ: ಎಲ್ಲಿಂದ ಬಂದಿದೆ ಎಂಬುದೇ ನಿಗೂಢ

ಮಂಗಳೂರು: ನಗರದ‌ ಉಪ್ಪಿನಂಗಡಿಯಲ್ಲಿ ಮಾಜಿ‌ ಸೈನಿಕನೋರ್ವರ ಮನೆಯ ಬಳಿ 40 ವರ್ಷಗಳ ಹಿಂದಿನದ್ದೆನ್ನಲಾದ ಅಪಾಯಕಾರಿ ಗ್ರೆನೈಡ್ ನಂತಹ 5 ವಸ್ತುಗಳು ಪತ್ತೆಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭೂಸೇನಾ ರೆಜಿಮೆಂಟ್ ನಲ್ಲಿ ಎಸ್ ಸಿಒ ಆಗಿ ನಿವೃತ್ತಿ ಹೊಂದಿರುವ ಜಯಕುಮಾರ್ ಪೂಜಾರಿ ಎಂಬವರ ಮನೆಯ ಬಳಿ ಈ ಗ್ರೇನೈಡ್ ವಸ್ತುಗಳು ಪತ್ತೆಯಾಗಿದೆ. ನಿನ್ನೆ ಸಂಜೆ 5.30 - 6 ಗಂಟೆ ಸುಮಾರಿಗೆ ಜಯಕುಮಾರ್ ಪೂಜಾರಿಯವರು ಉಪ್ಪಿನಂಗಡಿಯಿಂದ ಮನೆಯ ಬಳಿಗೆ ಬರುತ್ತಿದ್ದ ವೇಳೆ ಮನೆಯ ಪಕ್ಕದಲ್ಲಿ ಹರಡಿರುವ ಸ್ಥಿತಿಯಲ್ಲಿ ಈ ಗ್ರೇನೈಡ್ ನಂತಹ ವಸ್ತುಗಳು ಪತ್ತೆಯಾಗಿತ್ತು.

ಜಯಕುಮಾರ್ ಪೂಜಾರಿ ಭೂಸೇನಾ ರೆಜಿಮೆಂಟ್ ನಲ್ಲಿ ಎಸ್ ಸಿಒ ಆಗಿದ್ದರಿಂದ ಈ ವಸ್ತುಗಳು ಗ್ರೇನೈಡ್ ಎಂದು ಅವರಿಗೆ ತಿಳಿದು ಬಂದಿದೆ. ಆದ್ದರಿಂದ ಸಾರ್ವಜನಿಕರಿಗೆ ಅಪಾಯವಾಗಬಹುದು ಎಂಬುದನ್ನು ಅರಿತ ಅವರು, ಗ್ರೇನೈಡ್ ನಂತಹ ವಸ್ತುಗಳನ್ನು ಮನೆಯ ಅಂಗಳದ ಮೂಲೆಯಲ್ಲಿಟ್ಟು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪರಿಶೀಲನೆ ನಡೆಸಿರುವ ದ.ಕ.ಜಿಲ್ಲಾ ಎಸ್ಪಿ  ಋಷಿಕೇಶ ಸೋಣಾವಾಲ ಅವರು ಪ್ರತಿಕ್ರಿಯಿಸಿ, 'ದೊರಕಿರುವ ಗ್ರೇನೈಡ್ ನಂತಹ ವಸ್ತುಗಳು 40 ವರ್ಷಗಳ ಹಳೆಯದೆಂದು ಶಂಕಿಸಲಾಗಿದೆ. ಆದರೆ ಎಲ್ಲಿಂದ ಬಂದಿರುವುದೆಂದು ಇನ್ನೂ ತಿಳಿದು ಬಂದಿಲ್ಲ‌. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


Ads on article

Advertise in articles 1

advertising articles 2

Advertise under the article