ಪುಣೆ: ಚಾಕೊಲೇಟ್ ಕೊಳ್ಳಲು ಹಣ ಕೊಡುವೆನೆಂದು ಭರವಸೆ ನೀಡಿದ 12ರ ಬಾಲಕನೋರ್ವನು 4 ವರ್ಷದ ಬಾಲಕಿಯ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಸಂತ್ರಸ್ತೆಯ ಮನೆಯ ಪಕ್ಕದಲ್ಲಿನ ನಿವಾಸಿ ಬಾಲಕನಿಂದಲೇ ಈ ಕೃತ್ಯ ನಡಿದಿದೆ. ಆಟವಾಡಲು ಮನೆಯಿಂದ ಹೊರಬಂದ ಬಾಲಕಿಗೆ ಬಾಲಕ ಚಾಕೊಲೇಟ್ ಆಮಿಷವೊಡ್ಡಿ ದುರ್ಬಳಕೆ ಮಾಡಿಕೊಂಡಿದ್ದಾನೆ. ಈ ಘಟನೆ ಕಳೆದ ವಾರ ನಡೆದಿದ್ದು, ಈ ಬಗ್ಗೆ ಶನಿವಾರ ಪುಣೆಯ ಪಿಂಪ್ರಿ ಚಿಂಚವಾಡ ಪೊಲೀಸರು ಪ್ರಕರಣ ದಾಖಲಾಗಿದೆ.
ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಮತ್ತು ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯನ್ನು ಬಾಲಕ ತನ್ನ ಮನೆಗೆ ಕರೆದುಕೊಂಡು ಹೋಗಿ ಕೃತ್ಯ ಎಸಗಿದ್ದಾನೆಂದು ಬಾಲಕಿಯ ಪಾಲಕರು ಆರೋಪಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.