
ಇನ್ನು ಮುಂದೆ ವಾಟ್ಸ್ಆ್ಯಪ್ ವಾಯ್ಸ್ ರೆಕಾರ್ಡಿಂಗ್ ನಲ್ಲಿ ಪೌಸ್ ಬಟನ್
10/12/2021 08:48:00 PM
ನವದೆಹಲಿ: ಕಳೆದ ವಾರದಲ್ಲಿ ವಾಟ್ಸ್ಆ್ಯಪ್ ಸ್ಥಗಿತಗೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಗ್ರಾಹಕರು ಸಮಸ್ಯೆಯನ್ನು ಎದುರಿಸಿದ್ದರು. ಆಗಾಗ ಸರ್ವರ್ ಹಾಗೂ ಐಒಎಸ್ ಗಳನ್ನು ಅಪ್ ಡೇಟ್ ಮಾಡುವ ಮೂಲಕ ವಾಟ್ಸ್ಆ್ಯಪ್ ಹೊಸ ಫೀಚರೊಂದನ್ನು ಬಿಡುಗಡೆ ಮಾಡಲಿದೆ.
ಹೌದು ಇನ್ನು ಮುಂದೆ ವಾಟ್ಸ್ಆ್ಯಪ್ ನಲ್ಲಿ ವಾಯ್ಸ್ ರೆಕಾರ್ಡಿಂಗ್ ಕಳುಹಿಸುವ ಗ್ರಾಹಕರು ದೀರ್ಘಕಾಲದ ಮಾತುಗಳನ್ನು ರೆಕಾರ್ಡ್ ಮಾಡಲು ಅನುಕೂಲವಾಗುವಂತೆ ಪಾಸ್ ಬಟನ್ ಅನ್ನು ಬಿಡುಗಡೆ ಮಾಡಲಿದೆ.
ಈಗಾಗಲೇ 1x, 1.5x, 2x ಸ್ಪೀಡ್ ನಲ್ಲಿ ನಾವು ವಾಯ್ಸ್ ಮೆಸೇಜ್ ಗಳನ್ನು ಆಲಿಸಬಹುದಿತ್ತು.ಇದೀಗ ಹೆಚ್ಚು ಸಮಯ ಮಾತನಾಡುವವರಿಗೆ ಸಹಾಯವಾಗಲೆಂದು ಶೀಘ್ರದಲ್ಲೇ ಪೌಸ್ ಬಟನ್ ಕೂಡ ಬರಲಿದೆ ಎಂದು ತಿಳಿದು ಬಂದಿದೆ.