ಪ್ರೀತಿಸಿ ವಿವಾಹವಾಗಿರುವ ಪತ್ನಿಯ ಶೀಲವನ್ನು ಶಂಕಿಸಿ ಪತಿ ಮಾಡಬಾರದ್ದನ್ನು ಮಾಡಿದ!

ಶಿವಮೊಗ್ಗ: ಪ್ರೀತಿಸಿ ವಿವಾಹವಾಗಿರುವ ಪತ್ನಿಯ ಶೀಲವನ್ನು ಶಂಕಿಸಿ ಪತಿಯೇ ಆಕೆಯ ಹತ್ಯೆ ಮಾಡಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಆಯನೂರು ಮೂಲದ ಫಿಜಾ ಕೌಸರ್ (21) ಮೃತ ದುರ್ದೈವಿ. ಈಕೆಯ ಪತಿ ಶೋಯೆಬ್ ಕೊಲೆಗೈದ ಆರೋಪಿ. 

ಫಿಜಾ ಕೌಸರ್ ತನ್ನ ಊರಾದ ಆಯನೂರಿನಿಂದ ಶಿವಮೊಗ್ಗಕ್ಕೆ‌ ಕಾಲೇಜಿಗೆ ಬರುತ್ತಿದ್ದಳು. ಈ ಸಂದರ್ಭ ಆಕೆ ಶೋಯೆಬ್ ಪ್ರೀತಿಯ ಬಲೆಗೆ ಬಿದ್ದಿದ್ದಳು. ಬಳಿಕ ಆಕೆ ತನ್ನ ಮನೆಯವರ ವಿರೋಧದ ನಡುವೆಯೂ ಎರಡೂವರೆ ವರ್ಷಗಳ ಹಿಂದೆ ಶೋಯೆಬ್ ನನ್ನು ವಿವಾಹವಾಗಿದ್ದಳು. 

ಇತ್ತೀಚೆಗೆ ಆರೋಪಿ ಶೋಯೆಬ್, ಪತ್ನಿ ಫಿಜಾ ಕೌಸರ್ ಗೆ ಬೇರೊಬ್ಬರೊಂದಿಗೆ ಸಂಬಂಧ ಇದೆ ಎಂ​ದು ಅನುಮಾನಪಡುತ್ತಿದ್ದ ಎನ್ನಲಾಗಿದೆ. ಪರಿಣಾಮ ಪತಿನೊಂದಿಗೆ ಜಗಳ ಮಾಡಿಕೊಂಡು ಫಿಝಾ ಕೌಸರ್ ಒಂದು ವಾರದ ಹಿಂದೆ ತವರು ಮನೆಗೆ ಮರಳಿದ್ದಳು. ನಿನ್ನೆ ಕಂಪ್ಯೂಟರ್ ತರಗತಿಗೆಂದು ಶಿವಮೊಗ್ಗಕ್ಕೆ ಬಂದಿದ್ದ‌ ಆಕೆಯನ್ನು ಆಟೋದಲ್ಲಿ ಕರೆದೊಯ್ದ ಶೋಯೆಬ್​ ಕೊಲೆ‌ಗೈದಿದ್ದಾನೆ. 

ಬಳಿಕ ಆಕೆಯ ಒಡವೆಗಳನ್ನು ತೆಗೆದುಕೊಂಡು, ತುಂಗಾ ನಗರ ಪೊಲೀಸ್ ಠಾಣೆಗೆ ಬಂದು ತಾನೇ ಪತ್ನಿಯನ್ನು ಕೊಲೆಗೈದಿರುವುದಾಗಿ ಶರಣಾಗತದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.