ಬೆಂಗಳೂರಿನಲ್ಲಿ ‌ನಡೆಯಿತು ಬೆಚ್ಚಿ ಬೀಳಿಸುವ ಘಟನೆ- ವಿವಾಹಿತ ಅಕ್ಕನ ಬಾಯ್ ಫ್ರೆಂಡ್ ಕೊಲೆ ಮಾಡಿ ಪೊಲೀಸ್ ಠಾಣೆಗೆ ಶವ ತಂದು ಶರಣಾದ ಆರೋಪಿಗಳು!



ಬೆಂಗಳೂರು: ವಿವಾಹಯಾಗಿದ್ದ ತನ್ನ ಅಕ್ಕನ ಬಾಯ್ ಫ್ರೆಂಡನ್ನು ಹತ್ಯೆ ಮಾಡಿ ಆತನ ಶವವನ್ನು ರಿಕ್ಷಾ ದಲ್ಲಿ ಪೊಲೀಸ್ ಠಾಣೆಗೆ ತಂದು ಮಹಿಳೆಯ ಸಹೋದರ ಮತ್ತು ಇತರ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.

ಭಾಸ್ಕರ್ ಕೊಲೆಯಾದ ವ್ಯಕ್ತಿ. ಈತ ವಿವಾಹಿತ ಮಹಿಳೆ ಜೊತೆ ಸಂಬಂಧ ಬೆಳೆಸಿದ್ದ. ಈ ಹಿನ್ನೆಲೆಯಲ್ಲಿ  ಆಕೆಯ ತಮ್ಮ ಹಾಗೂ ಗೆಳೆಯರು ಸೇರಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ  ಬಳಿಕ ರಿಕ್ಷಾದಲ್ಲಿ ಶವ ತಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. 
ಪ್ರಕರಣದಲ್ಲಿ ಮಾಲೂರು ಮೂಲದ ಮುನಿರಾಜು ಮತ್ತು ಆತನ ಗೆಳೆಯರಾದ ಮಾರುತಿ, ನಾಗೇಶ್ ಹಾಗೂ ಪ್ರಶಾಂತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.


ಘಟನೆ ಏನು?

ಮೂಲತಃ ಮಾಲೂರಿನ ವಿವಾಹಿತ ಮಹಿಳೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಚಂದ್ರಶೇಖರ್ ಬಡಾವಣೆಯಲ್ಲಿ ವಾಸವಾಗಿದ್ದಳು. ಈಕೆ ತನ್ನ ಜೀವನಕ್ಕಾಗಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದು ಈಕೆಯ ಗಂಡ ಊರಿನಲ್ಲೇ ನೆಲೆಸಿದ್ದನು.ಗಂಡನನ್ನು ಬಿಟ್ಟು ಬಂದಿದ್ದ ಮಹಿಳೆ ನಗರದಲ್ಲಿ ಒಬ್ಬಳೇ  ನೆಲೆಸಿದ್ದಳು.

ಈಕೆಗೆ 2 ವರ್ಷಗಳ ಹಿಂದೆ ತಮಿಳುನಾಡಿನ ಭಾಸ್ಕರ್​ ಎಂಬಾತನ ಪರಿಚಯವಾಗಿ ಗೆಳೆತನ ಪ್ರೀತಿಗೆ ತಿರುಗಿತ್ತು. ಇವರ ಪ್ರೀತಿಯ ವಿಷಯ ಮಹಿಳೆ ಮನೆಯಲ್ಲಿ ಗೊತ್ತಾಗಿ  ಜಗಳವು ಆಗಿತ್ತು. 

ಎರಡು ವಾರಗಳ ಹಿಂದೆ ಮಾಲೂರಿನಿಂದ ನಗರಕ್ಕೆ ಬಂದು ಮನೆ ಮಾಡಿಕೊಂಡಿದ್ದ ಈ  ಮಹಿಳೆಯ ಮನೆಗೆ ಬಂದಿದ್ದ ಭಾಸ್ಕರ್ ಆಕೆಯನ್ನು ಬೇರೆ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆಯ ಪುತ್ರ ಭಾಸ್ಕರ್ ನೊಂದಿಗೆ ಬರಲು ನಿರಾಕರಿಸಿದ್ದನು. ಈ ಮಾಹಿತಿಯನ್ನು  ತಾಯಿಯ ತಮ್ಮ ಮುನಿರಾಜುಗೆ ಪೋನ್ ಮಾಡಿ  ತಿಳಿಸಿದ್ದ.


ಆಟೋವೊಂದರಲ್ಲಿ  ಹೋಗುತ್ತಿರುವುದಾಗಿ ಮಾಹಿತಿ ತಿಳಿದ  ಮುನಿರಾಜು ತನ್ನ ರಿಕ್ಷಾದೊಂದಿಗೆ ಭಾಸ್ಕರ್​​ನನ್ನ ಹಿಂಬಾಲಿಸಿ ಸುಂಕದಕಟ್ಟೆ  ಎಂಬಲ್ಲಿ ರಿಕ್ಷಾ ಅಡ್ಡಹಾಕಿ ಅಕ್ಕನನ್ನು ಮನೆಗೆ ಕರೆತಂದು ಬಿಟ್ಟಿದ್ದಾನೆ.


ನಂತರ ತನ್ನ ಗೆಳೆಯರನ್ನು ಕರೆದುಕೊಂಡು ಭಾಸ್ಕರ್​ನನ್ನು ರಿಕ್ಷಾದಲ್ಲಿ ಕೂರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಭಾಸ್ಕರ್ ಹಸಿವು ಆಗುತ್ತಿದೆ ಎಂದು ಬೇಡಿಕೊಂಡಿದ್ದು ಆಗ ಆತನಿಗೆ ಎಗ್ ರೈಸ್ ಕೊಡಿಸಿಮತ್ತೇ ಆತನ ಹಲ್ಲೆ ಮಾಡಿದ್ದು ಈ ವೇಳೆ ಭಾಸ್ಕರ್​  ಮೃತಪಟ್ಟಿದ್ದಾನೆ.

ಆತ ಸಾವನ್ನಪ್ಪಿರುವುದು ಗೊತ್ತಾಗುತ್ತಿದ್ದಂತೆ ತನ್ನ ತಾಯಿಗೆ ವಿಷಯವನ್ನು  ತಿಳಿಸಿ ಶವವನ್ನು ರಿಕ್ಷಾದಲ್ಲೇ ಇರಿಸಿಕೊಂಡು ಠಾಣೆಗೆ ಬಂದು ಕೊಲೆ ಮಾಡಿರುವುದಾಗಿ ಒಪ್ಪಿ ಶರಣಾಗಿದ್ದಾನೆ.