ನೈತಿಕ ಪೊಲೀಸ್ ಗಿರಿ ಬಗ್ಗೆ ಸಿಎಂ ಹೇಳಿಕೆಗೆ ಮುನೀರ್ ಕಾಟಿಪಳ್ಳ ಆಕ್ರೋಶ... ಸಿಎಂ ವೊಬ್ಬರು ಇಷ್ಟು ಬೇಜವಬ್ದಾರಿತನ ಮೆರೆಯುವುದು ನಾಚಿಕೆಗೇಡು..


ಮಂಗಳೂರು; ನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ‌ಮಂಗಳೂರಿನಲ್ಲಿ‌ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೀಡಿರುವ ಹೇಳಿಕೆಗೆ ಡಿವೈಎಫ್ಐ ರಾಜ್ಯಾಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದು ಸಿಎಂ ವೊಬ್ಬರು ಇಷ್ಟು ಬೇಜವಬ್ದಾರಿತನ ಮೆರೆಯುವುದು ನಾಚಿಕೆಗೇಡು ಎಂದಿದ್ದಾರೆ.

ಬೆಂಗಳೂರಿನಲ್ಲಿ ಮುಸಲ್ಮಾನ ಅನೈತಿಕ ಗೂಂಡಾಗಳು ಭಿನ್ನ ಧರ್ಮದ ಪುರುಷ‌ಮಹಿಳೆಯರ ಮೇಲೆ ಹಲ್ಲೆ ನಡೆಸಿದಾಗ  ಕಾನೂನಿನ ಪಾಠ ಮಾಡಿದ್ದ ಸಿಎಂ ಮಂಗಳೂರಿನ ಸಂಘಪರಿವಾರದ ಅನೈತಿಕ ಗೂಂಡಾಗಿರಿಯ ವಿಷಯದಲ್ಲಿ ಉಲ್ಟಾ ಹೊಡೆದಿದ್ದಾರೆ ಎಂದು ಆಪಾದಿಸಿದ್ದಾರೆ.

ಭಾವನೆಗಳಿಗೆ ಧಕ್ಕೆ, ಕ್ರಿಯೆಗೆ ಪ್ರತಿಕ್ರಿಯೆ ಎಂಬುದು ಎಲ್ಲಾ ಮತೀಯವಾದಿಗಳ ರೆಡಿಮೇಡ್ ಡೈಲಾಗ್. ಸಂವಿಧಾನದ ಮೇಲೆ ಪ್ರತಿಜ್ಞೆ ಮಾಡಿ ಅಧಿಕಾರ ಸ್ವೀಕರಿಸಿರುವ ಮುಖ್ಯಮಂತ್ರಿಯೊಬ್ಬರು ಅದೇ ಡೈಲಾಗ್ ಹೊಡೆಯುತ್ತಾರೆ, ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸುತ್ತಾರೆ ಅಂತಾದರೆ ಗತಿಯೇನು  ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಅವರ  ಹೇಳಿಕೆಯಿಂದ ಕೋಮುವಾದಿ ಸಂಘಟನೆಗಳ ಕಾರ್ಯಕರ್ತರು ಮತ್ತಷ್ಟು ಪ್ರಚೋದಿತರಾಗಿ ಬೀದಿಗಿಳಿಯುವುದು ಖಂಡಿತ. ಕ್ರಿಯೆಗೆ ಪ್ರತಿಕ್ರಿಯೆ ಎಂದು ಮತ್ತೊಂದು ಕೋಮಿನ ಅನೈತಿಕ ಪೊಲೀಸರೂ ಸ್ಪರ್ಧೆಗಿಳಿದರೆ ಪರಿಸ್ಥಿತಿ ಎಲ್ಲಿಗೆ ತಲುಪುತ್ತದೆ ? ಸಿಎಂ ಇಷ್ಟು ಬೇಜವಾಬ್ದಾರಿತನ ಮೆರೆಯುವುದು ನಾಚಿಕೆಗೇಡಾಗಿದ್ದುಪ್ರಜಾಪ್ರಭುತ್ವ ದೇಶದ ದುರಂತವಾಗಿದೆ.   ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮ ಹೇಳಿಕೆಗೆ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.


(ಮುಖ್ಯಮಂತ್ರಿ ಗಳು ಮಂಗಳೂರಿನಲ್ಲಿ ನೀಡಿರುವ ಹೇಳಿಕೆ)



BREAKING NEWS
Loading latest news...
Join our WhatsApp Channel Powered By : Online Pudu