ಮಂಗಳೂರಿನ ನೈತಿಕ ಪೊಲೀಸ್ ಗಿರಿ ಕಿರಿಕ್- ಮುಖ್ಯಮಂತ್ರಿಗಳ ಉತ್ತರ ಹೀಗಿತ್ತು! -ಭಾವನೆಗಳಿಗೆ ಧಕ್ಕೆ ಆದಾಗ ಕ್ರಿಯೆ ಪ್ರತಿಕ್ರಿಯೆ ಇರುತ್ತಂತೆ! (VIDEO)


ಮಂಗಳೂರು:  ಮಂಗಳೂರಿನಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ಬಗ್ಗೆ ಮಂಗಳೂರು ವಿಮಾನ‌ನಿಲ್ದಾಣದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಅವರು ಭಾವನೆಗಳಿಗೆ ಧಕ್ಕೆ ಆದಾಗ ಕ್ರಿಯೆ ‌ಪ್ರತಿಕ್ರಿಯೆ ಇರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಇದೊಂದು ಸೂಕ್ಷ್ಮ ವಿಚಾರವಾಗಿದ್ದು ಸಮಾಜದಲ್ಲಿರುವ ನಾವೆಲ್ಲರೂ ಜವಬ್ದಾರಿ ವಹಿಸಬೇಕು. ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಡೆಯಬೇಕಿದ್ದು, ಧಕ್ಕೆ ಬಂದಾಗ ಸಹಜವಾಗಿ ಕ್ರೀಯೆ ಪ್ರತಿಕ್ರಿಯೆಗಳು ನಡೆಯುತ್ತದೆ.

 ಕಾನೂನು ಸುವ್ಯವಸ್ಥೆ ಕಾಪಾಡುವುದು ಸರಕಾರದ ಕರ್ತವ್ಯ ಹೌದು.  ಅದಕ್ಕೆ ಎಲ್ಲರೂ ಸಹಕಾರವನ್ನು ಕೊಡಬೇಕು.  ಯುವಕರು ಸಮಾಜದ ಭಾವನೆಗಳಿಗೆ ಧಕ್ಕೆಯಾಗದಂತೆ ವರ್ತಿಸಬೇಕು. ಇದೊಂದು ಸಾಮಾಜಿಕ  ಪ್ರಶ್ನೆ ಯಾಗಿದೆ. ಸಮಾಜದಲ್ಲಿ  ನೈತಿಕತೆ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಹೇಳಿದರು.
( ವಿಡಿಯೋ ನೋಡಿ)