ಗೋವಾದಲ್ಲಿ ಮನೆ ಖರೀದಿ ಮಾಡಿರುವುದಾಗಿ ಸುಳಿವು ಬಿಟ್ಟುಕೊಟ್ಟ 'ಕಿರಿಕ್ ಬೆಡಗಿ'

ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರು ತಾವು ಗೋವಾದಲ್ಲಿ ಹೊಸ ಮನೆ ಖರೀದಿ ಮಾಡಿರುವುದಾಗಿ ಸುಳಿವು ಬಿಟ್ಟುಕೊಟ್ಟಿದ್ದಾರೆ. 

ಗೋವಾದಲ್ಲಿರುವ ತಮ್ಮ ಮನೆಯ   ಹೊರಾಂಗಣದ ಫೋಟೋವನ್ನು ಇನ್​ಸ್ಟಾಗ್ರಾಂ ಸ್ಟೇಟಸ್​ನಲ್ಲಿ ಶೇರ್​ ಮಾಡಿ ಸುಳಿವು ಬಿಟ್ಟಿಕೊಟ್ಟಿದ್ದಾರೆ.  "ಗೋವಾದಲ್ಲಿ ನೀವು ಹೊಸ ಮನೆ ಖರೀದಿಸಿದಾಗ ಹೊಟ್ಟೆ ಕಿಚ್ಚು ಹೆಚ್ಚಾಗುತ್ತದೆ ಅಲ್ವಾ?" ಎಂದು ಪ್ರಶ್ನಾರ್ಥಕ ಚಿಹ್ನೆ ಬಳಸಿ ಫೋಟೋಗೆ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ‌. ಇದೀಗ ಈ  ಬರವಣಿಗೆ ರಶ್ಮಿಕಾ ಗೋವಾದಲ್ಲಿ ಮನೆ ಖರೀದಿಸಿರುವ ಬಗ್ಗೆ ಸುಳಿವು ಕೊಟ್ಟಂತಾಗಿದೆ. 

ಈ ನಡುವೆ ರಶ್ಮಿಕಾ ಯಾರಿಗೆ ಈ ರೀತಿ ಟಾಂಗ್ ಕೊಟ್ಟಿದ್ದಾರೆಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ರಶ್ಮಿಕಾ, ಮುಂಬೈನಲ್ಲಿ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದರು. ಟಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಕಿರಿಕ್ ಬೆಡಗಿ ರಶ್ಮಿಕಾ, ಅಲ್ಲಿ ತಮ್ಮ ಅನುಕೂಲಕ್ಕಾಗಿ ಮನೆಗಳನ್ನು ಖರೀದಿಸಿದ್ದಾರೆಂದು ಹೇಳಲಾಗುತ್ತಿದೆ. ಇದೀಗ ಗೋವಾದಲ್ಲಿ ಮನೆ ಖರೂದಿ ಮಾಡಿರುವುದಾಗಿ ತಾವೇ ಸುಳಿವು ಕೊಟ್ಟಿದ್ದು, ಆ ಬಗ್ಗೆ ಮತ್ತಷ್ಟು ಅಪ್​ಡೇಟ್​ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.