-->
ಮಂಗಳೂರಿನಲ್ಲಿ ನಡೆಯಿತು ಹೇಯಕೃತ್ಯ- ಎರಡು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ- ಕೊಲೆಗೂ ಯತ್ನಿಸಿದ್ದ ಕಾಮುಕ

ಮಂಗಳೂರಿನಲ್ಲಿ ನಡೆಯಿತು ಹೇಯಕೃತ್ಯ- ಎರಡು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ- ಕೊಲೆಗೂ ಯತ್ನಿಸಿದ್ದ ಕಾಮುಕ
ಮಂಗಳೂರು; ಮಂಗಳೂರಿನಲ್ಲಿ ಎರಡು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹೇಯ ಘಟನೆ ನಡೆದಿದೆ.

ಮಂಗಳೂರಿನಲ್ಲಿ ಹೊಯಿಗೆ ಬಜಾರ್ ನಲ್ಲಿರುವ ಫಿಶ್ ಕಟ್ಟಿಂಗ್ ಯಾರ್ಡ್ ನಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ಚಂದನ್ (38)ಈ ಹೇಯ ಕೃತ್ಯ ಎಸಗಿದ ಕಾಮುಕ.

ಹೊಯಿಗೆ ಬಜಾರ್ ನ ಈ ಫಿಶ್ ಕಟ್ಟಿಂಗ್ ಯಾರ್ಡ್ ನಲ್ಲಿ ಸುಮಾರು 30 ಕುಟುಂಬದ 70 ಮಂದಿ ವಾಸವಿದ್ದು ಇವರೆಲ್ಲ ಬಿಹಾರ ಮೂಲದವರಾಗಿದ್ದಾರೆ. ಇವರು ಕೆಲಸಕ್ಕೆ ಹೋದ ವೇಳೆಗೆ ಇವರ ಮಕ್ಕಳನ್ನು ಒಂದೆಡೆ ಒಟ್ಟಿಗೆ ಇರುತ್ತಾರೆ. 

ನಿನ್ನೆ ಸಂಜೆ ವೇಳೆಗೆ ಎರಡು ವರ್ಷದ ಮಗುವಿನ ತಂದೆ ತಾಯಿ ಫ್ಯಾನ್  ಖರೀದಿಗೆಂದು ಮಾರುಕಟ್ಟೆ ಗೆ ಹೋಗಿದ್ದ ವೇಳೆ ಆರೋಪಿ ಚಂದನ್ ಮಗುವನ್ನು ಕರೆದುಕೊಂಡು ಹೋಗಿದ್ದಾನೆ. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮಗು ವನ್ನು ಉಪ್ಪು ನೀರು ಶೇಖರ ಮಾಡುವ ಟ್ಯಾಂಕ್ ಗೆ ಬಿಸಾಡಿದ್ದಾನೆ.

ಸಂಜೆ ಮಾರುಕಟ್ಟೆ ಯಿಂದ ಬಂದ ವೇಳೆ ಮಗುವಿನ ತಂದೆ ತಾಯಿಗೆ ಮಗು ನಾಪತ್ತೆ ಯಾಗಿರುವುದು ತಿಳಿದುಬಂದಿದ್ದು ಎಲ್ಲಾ ಕಡೆ ಹುಡುಕಾಡಿದ ವೇಳೆ ಟ್ಯಾಂಕ್ ನಲ್ಲಿ ಪ್ರಜ್ಞಾಹೀನ ವಾಗಿ ಪತ್ತೆಯಾಗಿದೆ.
ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ವೇಳೆ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದುಬಂದಿದೆ. ಮಗುವಿಗೆ ಪ್ರಜ್ಞೆ ಬಂದಿದ್ದು ಸದ್ಯ ಆರೋಗ್ಯವಾಗಿದೆ. ಮಗುವಿನ ಲಂಗ್ಸ್ ಗೆ ಹೋಗಿರುವ ಉಪ್ಪು ನೀರಿನ ಹೊರತೆಗೆಯಲು ಚಿಕಿತ್ಸೆ ನೀಡಿದ ಬಳಿಕ ಎರಡು ದಿನದಲ್ಲಿ ಡಿಸ್ಚಾರ್ಜ್ ಆಗಲಿದೆ.

ಆರೋಪಿ ಚಂದನ್ ನನ್ನು ಬಂಧಿಸಿರುವ ಪೋಲೀಸರು ತನಿಖೆ ಮುಂದುವರಿಸಿದ್ದಾರೆ.
Ads on article

Advertise in articles 1

advertising articles 2

Advertise under the article