Job in Mangaluru City Corporation - ಮಂಗಳೂರು ಮಹಾನಗರ ಪಾಲಿಕೆಯಲ್ಲಿ 190 ಉದ್ಯೋಗ: ಯಾವುದೇ ವಿದ್ಯಾರ್ಹತೆ ಇಲ್ಲ!

ಮಂಗಳೂರು ಮಹಾನಗರ ಪಾಲಿಕೆಯಲ್ಲಿ 190 ಉದ್ಯೋಗ: ಯಾವುದೇ ವಿದ್ಯಾರ್ಹತೆ ಇಲ್ಲ!





ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 190 ಪೌರ ಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಸಂಸ್ಥೆ: ಮಂಗಳೂರು ಮಹಾನಗರ ಪಾಲಿಕೆ


ಹುದ್ದೆಯ ಹೆಸರು: ಪೌರ ಕಾರ್ಮಿಕರು



ಒಟ್ಟು ಖಾಲಿ ಇರುವ ಹುದ್ದೆ: 190 ಹುದ್ದೆ



ಕನಿಷ್ಟ ವಿದ್ಯಾರ್ಹತೆ: ವಿದ್ಯಾರ್ಹತೆ ಅನ್ವಯಿಸುವುದಿಲ್ಲ. ಕನ್ನಡ ಮಾತನಾಡಲು ಗೊತ್ತಿರಬೇಕು. ಪೌರ ಕಾರ್ಮಿಕ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ಸಮಾನ ವೇತನ ನೌಕರರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.



ವಯೋಮಿತಿ: ಅರ್ಜಿ ಸಲ್ಲಿಸಲು ಕೊನೆ ದಿನಾಂಕದಂದು 18 ವರ್ಷ ಪೂರ್ಣ ಗೊಂಡಿರಬೇಕು. ಗರಿಷ್ಟ 45 ವರ್ಷ.



ವೇತನ ಶ್ರೇಣಿ: ರೂ. 17000/- to ರೂ. 28950/-


ಅರ್ಜಿ ಶುಲ್ಕ:

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1. ಅಂಗವಿಕಲರು- ರೂ. 100/-

ಇತರರು- ರೂ. 200/-


ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಪಿಡಿಎಫ್‌ ಫೈಲನ್ನು ಡೌನ್‌ಲೋಡ್ ಮಾಡಿಕೊಂಡು ಕೆನರಾ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ನಿಗದಿತ ಶುಲ್ಕವನ್ನು ಪಾವತಿ ಮಾಡಬೇಕು.


ಅಗತ್ಯ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.



ಅರ್ಜಿ ಸಲ್ಲಿಸಲು ಆರಂಭದ ದಿನ: 7/10/2021


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23/11/2021


ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಬಳಸಿ:

http://www.mangalurucity.mrc.gov.in/kn/recuritment