-->
ರೆಸ್ಟೋರೆಂಟ್ ಗೆ ಹೋದ ನಾಲ್ವರ ಬಿಲ್ ನೋಡಿ ದಂಗಾಗಲೇ ಬೇಕು: ಅಂತದ್ದೇನು ತಿಂದಿದ್ದಾರೆ ಇವರು?, ಬಿಲ್ ವೈರಲ್

ರೆಸ್ಟೋರೆಂಟ್ ಗೆ ಹೋದ ನಾಲ್ವರ ಬಿಲ್ ನೋಡಿ ದಂಗಾಗಲೇ ಬೇಕು: ಅಂತದ್ದೇನು ತಿಂದಿದ್ದಾರೆ ಇವರು?, ಬಿಲ್ ವೈರಲ್

ಲಂಡನ್: ಸಾಮಾನ್ಯವಾಗಿ ರೆಸ್ಟೋರೆಂಟ್​ಗೋ, ಹೊಟೇಲಿಗೋ ಹೋದರೆ ಎಷ್ಟೊಂದು ಮಹಾ ಖರ್ಚಾಗಬಹುದು ಎಂದು ಅಂದುಕೊಳ್ಳಬಹುದು. ಆದರೆ ನಾಲ್ವರು ಸೇರಿ ರೆಸ್ಟೋರೆಂಟ್​ಗೆ ಹೋಗಿ ಡಿನ್ನರ್​ಗಾಗಿ ಲಕ್ಷಾಂತರ ರೂ. ಖರ್ಚು ಮಾಡಿರುವ ಸುರಿದಿದ್ದಾನೆಂದರೆ ಎಲ್ಲರೂ ಹುಬ್ಬೇರಿಸಲೇಬೇಕು. 

ಲಂಡನ್​ನ ರೆಸ್ಟೋರೆಂಟ್​ನಲ್ಲಿ ನಾಲ್ವರು ಸೇರಿ ಬರೋಬ್ಬರಿ 38 ಲಕ್ಷ ರೂಪಾಯಿ ಖರ್ಚು ಮಾಡಿರುವ ಸುದ್ದಿ ವೈರಲ್ ಆಗಿದ್ದು, ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ. ಈ ನಾಲ್ವರು ಹೋಗಿರೋದು ವಿಶ್ವ ಪ್ರಸಿದ್ಧಿ ಹೊಂದಿದ ರೆಸ್ಟೋರೆಂಟ್​ ಆಗಿದೆ.

ನಾಲ್ವರು ಒಟ್ಟು 22 ವಿವಿಧ ಖಾದ್ಯಗಳನ್ನು ಆರ್ಡರ್ ಮಾಡಿದ್ದು, ಅದರ ಬಿಲ್​ನ ಸ್ಕ್ರೀನ್ ಶಾಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇವರು ಆರ್ಡರ್ ಮಾಡಿರೋದು ದುಬಾರಿ ಬೆಲೆಯ ತಿಂಡಿಗಳು. ಜೈಂಟ್ ಟೊಮಾಹಾಕ್ ಸ್ಟೀಕ್, ಬರ್ಗರ್, ಪ್ರಾನ್ ಟೆಂಪುರಾ ರೋಲ್ಸ್ ಎಂಬೆಲ್ಲಾ ತಿಂಡಿಗಳ ಹೆಸರು ಬಿಲ್​ಗಳಲ್ಲಿವೆ. 

ಬಿಲ್​ನಲ್ಲಿದ್ದ 38 ಲಕ್ಷ ರೂ. ಮೊತ್ತವನ್ನು ನೋಡಿ ಕೆಲವರು ಆಶ್ಚರ್ಯಗೊಂಡಿದ್ದಾರೆ. ಇನ್ನು ಕೆಲವರು, ಇದು ಲಂಡನ್​ನಂತಹ ನಗರದಲ್ಲಿ ಇದನ್ನು ನಿರೀಕ್ಷಿಸಬಹುದು ಎಂದು ಅಭಿಪ್ರಾಯ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article