-->
ಚಂದ್ರನ ಮೇಲೆ ಸೈಟು ಕೊಡಿಸುವುದಾಗಿ ಹೇಳಿ ಮಹಿಳೆಗೆ ವಂಚನೆ!

ಚಂದ್ರನ ಮೇಲೆ ಸೈಟು ಕೊಡಿಸುವುದಾಗಿ ಹೇಳಿ ಮಹಿಳೆಗೆ ವಂಚನೆ!

ಬೆಂಗಳೂರು: ಭೂಮಿ ಮೇಲೆ ಸೈಟು, ಫ್ಲ್ಯಾಟ್, ಮನೆ ಖರೀದಿಸಲು ಕೆಲವರು ಪಾಡುಪಡುತ್ತಿರುವಾಗ ಇಲ್ಲೊಬ್ಬ ಮಹಿಳೆಯು ಚಂದ್ರನ ಮೇಲೆ ಸೈಟ್ ಪಡೆಯುವ ಆಸೆಯಿಂದ ಹಣ ಕೊಟ್ಟು ಮೋಸ ಹೋಗಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆ ನೀಡಿರುವ ದೂರಿನನ್ವಯ ಈ ಬಗ್ಗೆ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಸ ಹೋದ ಮಹಿಳೆಗೆ ಸಾಮಾಜಿಕ ಜಾಲತಾಣದಲ್ಲಿ ಉಸ್ಕಾ ಅಬೂಬಕರ್ ಎಂಬಾಕೆ ಪರಿಚಯವಾಗಿದೆ‌. ಈಕೆ ತಾನು ಕ್ರಿಪ್ಟೊ ಕರೆನ್ಸಿ ವ್ಯವಹಾರ ತಜ್ಞೆ ಎಂದು ಹೇಳಿಕೊಂಡಿದ್ದಳು. ಇನ್ನೂ ಭಾರತದಲ್ಲಿ ಅಷ್ಟೊಂದು ಪರಿಚಯವಾಗದ ಕ್ರಿಪ್ಟೋಕರೆನ್ಸಿ ಬಗ್ಗೆ ಕೇಳಿ ಮಹಿಳೆ ಮೋಸದ ಮಾತಿಗೆ ಮರುಳಾಗಿದ್ದಾಳೆ. ಅದೇ ರೀತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ದೊರಕಿಸಿ ಕೊಡುವುದಾಗಿ ಆಮಿಷವೊಡ್ಡಿ 45,700 ರೂ. ಹೂಡಿಕೆ ಮಾಡುವಂತೆ ಪುಸಲಾಯಿಸಿದ್ದಾಳೆ. ಅದಕ್ಕೆ ಒಪ್ಪಿರುವ ಮೋಸಹೋದ ಮಹಿಳೆ 25 ಸಾವಿರ ರೂ. ಗೂಗಲ್ ಪೇ ಮೂಲಕ ವರ್ಗಾವಣೆ ಮಾಡಿದ್ದಾರೆ.

ಆದರೆ, ಆಕೆಗೆ ಬಳಿಕ ಯಾವುದೇ ಲಾಭಾಂಶ ಸಿಗಲಿಲ್ಲ. ಮತ್ತೆ ಆಕೆಯನ್ನು ಸಂಪರ್ಕ ಮಾಡಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದರಿಂದ ಮಹಿಳೆಗೆ ತಾನು ಮೋಸ ಹೋಗಿರುವುದಾಗಿ ತಿಳಿದಿದೆ. ಇದಾದ ಬಳಿಕ ಆಕೆ ತಾನು ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡುರುವ ಬ್ಯಾಂಕ್ ಖಾತೆ ಜಾಡು ಪತ್ತೆ ಮಾಡಿದ್ದಾರೆ.

ಆಗ ಆ ಬ್ಯಾಂಕ್ ಖಾತೆಯು ಆಕಾಶ್ ನಾರಾಯಣ್ ಎಂಬಾತನಿಗೆ ಸೇರಿದ ಐಸಿಐಸಿಐ ಬ್ಯಾಂಕ್ ಖಾತೆ ಆಗಿತ್ತು. ಈತ ಇದೇ ರೀತಿ ಹಲವರಿಗೆ ವಂಚನೆ ಮಾಡಿರುವುದು ಸಹ ಈ ಸಂಎ ಬೆಳಕಿಗೆ ಬಂದಿದೆ. ಅಲ್ಲದೆ, ಚಂದ್ರನ ಮೇಲೆ ಸೈಟು ಕೊಡಿಸುವುದಾಗಿ ನಂಬಿಸಿ ಆತ ಹಲವರಿಂದ ಹಣ ವಸೂಲಿ ಮಾಡಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. 

ಮಹಿಳೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article