-->
ಪತಿಯ ಧನದಾಹಕ್ಕೆ ಮೈಸೂರು ವಿವಿ ಚಿನ್ನದ ಪದಕ ವಿಜೇತೆ ಬಲಿ!

ಪತಿಯ ಧನದಾಹಕ್ಕೆ ಮೈಸೂರು ವಿವಿ ಚಿನ್ನದ ಪದಕ ವಿಜೇತೆ ಬಲಿ!

ಮೈಸೂರು: ಮೈಸೂರು ವಿವಿಯಲ್ಲಿ ಬಂಗಾರದ ಪದಕ ಪಡೆದ ಯುವತಿ ಈಗ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕುಟುಂಬಸ್ಥರು ಪತಿಯೇ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.

ಮದ್ದೂರು ತಾಲೂಕಿನ ಮಡೇನಹಳ್ಳಿ ನಿವಾಸಿ ಆಶಾ ಮೃತಪಟ್ಟ ದುರ್ದೈವಿ. ಎಂಟು ವರ್ಷಗಳ ಹಿಂದೆ ಆಶಾ ಪ್ರೀತಿಸಿ‌ ಮಳವಳ್ಳಿಯ ನಾಗಪ್ರಸಾದ್ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದರು. 

ವಿವಾಹದ ಬಳಿ ಪತಿ - ಪತ್ನಿ ಮೈಸೂರಿನಲ್ಲಿ ವಾಸವಾಗಿದ್ದರು. ಧನಪಿಶಾಚಿಯಾದ ನಾಗಪ್ರಸಾದ್  ಆಶಾಗೆ ಹಣ‌ ತೆಗೆದುಕೊಂಡು ಬರುವಂತೆ ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಎರಡು ಮೂರು ಬಾರಿ ಆಕೆ ಪೊಲೀಸ್ ದೂರು ಕೂಡಾ ನೀಡಿದ್ದಳು.

ಈ ನಡುವೆ ಅವರ ದಾಂಪತ್ಯದಲ್ಲಿ ಬಿರುಕು ಮೂಡಿ ವಿಚ್ಛೇದನದ ಹಂತಕ್ಕೂ ತಲುಪಿತ್ತು. ಬಳಿಕ ಕೌಟುಂಬಿಕ ನ್ಯಾಯಾಲಯದಲ್ಲಿ ರಾಜಿ ಮಾಡಿ ಇಬ್ಬರನ್ನೂ ಒಂದು ಮಾಡಲಾಗಿತ್ತು. ಆ ಬಳಿಕವೂ ನಾಗಪ್ರಸಾದ್​ ಕಿರುಕುಳ ನೀಡುತ್ತಲೇ ಇದ್ದ ಎಂದು ಆಶಾ ಪಾಲಕರು ಆರೋಪ ಮಾಡಿದ್ದಾರೆ. ಹಣಕ್ಕಾಗಿ ನಾಗಪ್ರಸಾದ್​ ಪೀಡನೆ ದಿನದಿಂದ ದಿನಕ್ಕೆ ಹೆಚ್ಚಾಗಿತ್ತು ಎನ್ನಲಾಗಿದೆ.

ಆಶಾ ಅ.8ರಂದು ಪತಿಯ ಮನೆ ತೊರೆದು ಪಿಜಿಯಲ್ಲಿ ಇರುತ್ತೇನೆಂದು ಹೇಳಿ ಹೋಗಿದ್ದ ಆಶಾ, ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಾಗಪ್ರಸಾದ್ ಆಕೆಯ ಹೆತ್ತವರಿಗೆ ಕರೆ ಮಾಡಿ ತಿಳಿಸಿದ್ದಾನೆ. ಆದರೆ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆಶಾ ಸಂಬಂಧಿಕರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. 

ಈ ಸಂಬಂಧ ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Ads on article

Advertise in articles 1

advertising articles 2

Advertise under the article