Bantwal- ಗಾಂಧಿಯವರ ಅಹಿಂಸಾ ಸಿದ್ಧಾಂತ ಯುವಜನರಿಗೆ ಮನವರಿಕೆ: ರೈ ಪ್ರತಿಪಾದನೆ

ಗಾಂಧಿಯವರ ಅಹಿಂಸಾ ಸಿದ್ಧಾಂತ ಯುವಜನರಿಗೆ ಮನವರಿಕೆ: ರೈ ಪ್ರತಿಪಾದನೆ





ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಅಹಿಂಸಾ ಸಿದ್ದಾಂತದ ಬಗ್ಗೆ ಇಂದಿನ ಯುವ ಜನತೆಗೆ ಮನವರಿಕೆ ಮಾಡಿಕೊಡುವ ಅನಿವಾರ್ಯತೆ ಇದೆ ಎಂದು ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.



ಬಂಟ್ವಾಳದಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಭಾಗವಹಿಸಿದ ಬಳಿಕ ಚಳವಳಿಗೆ ದೇಶವ್ಯಾಪಿ ವೇಗ ಸಿಕ್ಕಿದರೂ ಎಲ್ಲಿಯೂ ಹಿಂಸೆ, ದೊಂಬಿಗೆ ಪ್ರಚೋದನೆ ನೀಡದೆ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಅವರು ಯಶಸ್ವಿಯಾದದ್ದು ಇತಿಹಾಸ ಎಂದು ನೆನಪಿಸಿದರು.







ಗಾಂಧೀಜಿಯವರ ಸತ್ಯ ಅಹಿಂಸೆ ಸಿದ್ದಾಂತವನ್ನು ಮತ್ತೆ ಪ್ರತಿಪಾದಿಸುವ ಅನಿವಾರ್ಯತೆ ಈಗ ಇದೆ. ವಿವಿಧತೆಯಲ್ಲಿ ಏಕತೆ ಮೂಡಿಸುವ, ಜಾತಿ, ಧರ್ಮ, ಭಾಷೆಗಳನ್ನು ಒಗ್ಗೂಡಿಸಿ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಹೋರಾಟ ಮಾಡುವುದು ಸುಲಭದ ಕೆಲಸವಲ್ಲ. ಮಹಾತ್ಮ ಗಾಂಧಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಇದು ನಮಗೆ ಆದರ್ಶ ಎಂದು ಅವರು ಹೇಳಿದರು.




ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಖಾತ್ರಿಯಾಗಬೇಕು ಎಂಬುದು ಗಾಂಧಿ ಕನಸು. ಅವರು ಪ್ರಜಾಸತ್ತೆಯನ್ನು ಬಲಪಡಿಸುವ ಕೆಲಸ ಮಾಡಿದ್ದರು. ಆದರೆ ಈಗ ಪ್ರಜಾಪ್ರಭುತ್ವ ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.


BREAKING NEWS
Loading latest news...
Join our WhatsApp Channel Powered By : Online Pudu