Athmanirbhar India - ಆತ್ಮನಿರ್ಭರ ಭಾರತ: ಕಿರು ಉದ್ದಿಮೆಗಳಿಗೆ 10 ಲಕ್ಷ ಸಹಾಯಧನ- ಇಲ್ಲಿದೆ ಮಾಹಿತಿ
ಆತ್ಮನಿರ್ಭರ ಭಾರತ: ಕಿರು ಉದ್ದಿಮೆಗಳಿಗೆ 10 ಲಕ್ಷ ಸಹಾಯಧನ- ಇಲ್ಲಿದೆ ಮಾಹಿತಿ
ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಕಾರ್ಯಕ್ರಮದಡಿ ವೈಯಕ್ತಿಕ ಕಿರು ಉದ್ದಿಮೆಗಳಿಗೆ 10 ಲಕ್ಷ ರೂ.ಗಳ ಸಹಾಯಧನ ಪಡೆಯಲು ಅವಕಾಶವಿದೆ.
ಈ ಯೋಜನೆಯಡಿ ಮೀನಿನ ಖಾದ್ಯಗಳಾದ ಚಟ್ನಿ ಪುಡಿ, ಉಪ್ಪಿನಕಾಯಿ, ಚಕ್ಕುಲಿ, ಸೆಂಡಿಗೆ, ಚಿಪ್ಸ್, ರೋಟಿ, ಇತ್ಯಾದಿಗಳನ್ನು ತಯಾರಿಸುವುದು, ಮೀನನ್ನು ಭಾಗಗಳಾಗಿ ಮಾಡಿ ಫಿಲ್ಲೆಟ್ಸ್, ಸ್ಟಿಕ್ಸ್ ಮಾದರಿಯಲ್ಲಿ ಶೀತಲೀಕರಿಸುವುದು, ಮಾರಾಟ ಮಾಡುವುದು, ಮೀನನ್ನು ಉಪ್ಪು ಹಾಕಿ ಅಥವಾ ಉಪ್ಪಿಲ್ಲದೇ ಆಧುನಿಕ ರೀತಿಯಲ್ಲಿ ಒಣಗಿಸುವುದು ಹಾಗೂ ಇವುಗಳನ್ನು ಆಕರ್ಷಕ ರೀತಿಯಲ್ಲಿ ಪ್ಯಾಕ್ ಮಾಡಿ, ಲೇಬಲ್ ಮಾಡಿ ಮಾರಾಟ ಮಾಡಬಹುದಾಗಿದೆ.
ಆತ್ಮ ನಿರ್ಭರ ಭಾರತ ಅಭಿಯಾನದಲ್ಲಿ ಉದ್ಯಮ ನಡೆಸಲು ಬಯಸುವ ಆಸಕ್ತಿ ಇರುವ ಅಭ್ಯರ್ಥಿಗಳು ಜಿಲ್ಲಾ ಪಂಚಾಯತ್‍ನಲ್ಲಿ ಇರುವ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.