200 ಕೋಟಿ ಜೀವನಾಂಶವನ್ನು ಬೇಡ ಅಂದ್ರ ಈ ನಟಿ?

 



ಹೈದರಾಬಾದ್: ನಿನ್ನೆಯಷ್ಟೆ ವಿಚ್ಚೇದನದ ಬಗ್ಗೆ ಮಾಹಿತಿ ನೀಡಿದ ಸ್ಟಾರ್ ನಟಿ ಸಮಂತಾ 200 ಕೋಟಿ ಜೀವನಾಂಶವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

 

ಟಾಲಿವುಡ್ ಸ್ಟಾರ್ ಗಳಾದ ಸಮಂತಾ ಮತ್ತು ನಾಗಚೈತನ್ಯ ಅವರು ವಿಚ್ಚೇಧನ ಘೋಷಿಸಿದ್ದು ಇದನ್ನು ನಟಿ ನಿನ್ನೆ ಇನ್ಸ್ಟಾ ಗ್ರಾಂ ನಲ್ಲಿ ಖಚಿತಪಡಿಸಿದ್ದರು.  ಇವರ ವಿಚ್ಚೇದನದ ಹಿನ್ನೆಲೆಯಲ್ಲಿ ನಾಗಚೈತನ್ಯ ಮತ್ತು ಅಕ್ಕಿನೇನಿ ಕುಟುಂಬ 200 ಕೋಟಿ ಜೀವನಾಂಶವನ್ನು ನೀಡಲು ನಿರ್ಧರಿಸಿತ್ತು ಎಂದು ತಿಳಿದುಬಂದಿದೆ.

 

ಆದರೆ ಬಹುಬೇಡಿಕೆಯ ನಟಿ ಸಮಂತಾ ಈ ಆಪರ್ ನ್ನು ತಿರಸ್ಕರಿಸಿದ್ದಾರೆ.  ನಾಗಚೈತನ್ಯ ಕುಟುಂಬದ ಒಂದು ಪೈಸೆಯು ನನಗೆ ಬೇಕಾಗಿಲ್ಲ. ಅವರ 200 ಕೋಟಿ ನನಗೆ ಬೇಡ ಎಂದು ಹೇಳಿದ್ದಾರೆಂದು ಸುದ್ದಿ ಹರಿದಾಡುತ್ತಿದೆ.

 

ಟಾಲಿವುಡ್ ನಲ್ಲಿ ಸಮಂತಾ ಅಗ್ರಸ್ಥಾನದಲ್ಲಿರುವುದರಿಂದ ಇವರಿಗೆ ಹಣದ ಕೊರತೆ ಇಲ್ಲ.  ಇದೇ ಕಾರಣಕ್ಕೆ ಪತಿಯ ಕುಟುಂಬದಿಂದ ಸಿಗಬೆಕಿದ್ದ ಜೀವನಾಂಶವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ. ನಾಲ್ಕು ವರ್ಷದ ದಾಂಪತ್ಯ ಜೀವನ ನಡೆಸಿದ ನಾಗಚೈತನ್ಯ ಮತ್ತು ಸಮಂತ ಐದನೇ ವರ್ಷಕ್ಕೆ ಕಾಲಿಡುವ ವೇಳೆಗೆ ವಿಚ್ಚೇದನ ಪಡೆದು ದೂರವಾಗಿದ್ದಾರೆ