ನಾಲ್ಕು ತಿಂಗಳ ಹಿಂದೆ ಮೃತಪಟ್ಟಿದ್ದ ಮಹಿಳೆಗೆ ಲಸಿಕೆ ನೀಡಿದ ಅಪರೂಪದ ಸಾಧನೆಯೊಂದು ಮೀರತ್‌ನಲ್ಲಿ ದಾಖಲಾಗಿದೆ!.
2021ರ ಸೆ .8ರಂದು ಸತ್ತವರಿಗೂ ಕೋವಿಡ್ ಲಸಿಕೆ ಹಾಕಿಸಿದ ಘಟನೆ ಮೀರತ್ ಜಿಲ್ಲೆಯ ಸರ್ಧನ ಎಂಬಲ್ಲಿ ನಡೆದಿದೆ. ಈ ಸಂದೇಶ ಕುಟುಂಬಸ್ಥರಿಗೆ ಬಂದ ತಕ್ಷಣ ಕುಟುಂಬಸ್ಥರು ಸರ್ಕಾರದ ಉಚಿತ ಲಸಿಕೆ ಸಾಧನೆಗೆ ಮರುಳಾಗಿದ್ದಾರೆ. ಜೊತೆಗೆ ಗೊಂದಲಕ್ಕೀಡಾಗಿದ್ದಾರೆ!
ನಾಲ್ಕು ತಿಂಗಳ ಹಿಂದೆ ಫರಾ ಎಂಬವರು ಮೃತಪಟ್ಟಿದ್ದರು. ಆದರೆ, ಸೆಪ್ಟಂಬರ್ 8ರಂದು ಮೃತರ ಸಹೋದರ ವಾಸಿಂ ಎಂಬವರ ಮೊಬೈಲ್ ಗೆ ಫರಾ ಅವರಿಗೆ ಕೊವಿಡ್ ಲಸಿಕೆ ಯಶಸ್ವಿಯಾಗಿ ನೀಡಲಾಗಿದೆ ಎಂದು ಸಂದೇಶ ಬಂದಿದೆ.
ಆ ಸಂದೇಶದಿಂದಲೇ ಆರೋಗ್ಯ ಕೇಂದ್ರದ ಈ ಯಡವಟ್ಟು ಬೆಳಕಿಗೆ ಬಂದಿದ್ದು, ಕುಟುಂಬಸ್ಥರಿಗೆ ಸಂದೇಶ ನೋಡಿ ತಲೆ ಸುತ್ತು ಬಂದಿದೆ.
