ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದ ಹೈಕೋರ್ಟ್ !

 

 


ಬೆಂಗಳೂರು: ವಿಕೃತಕಾಮಿ ಉಮೇಶ್​ ರೆಡ್ಡಿಗೆ  ಗಲ್ಲು ಶಿಕ್ಷೆ ಖಾಯಂಗೊಳಿಸಿ  ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.  2006ರಲ್ಲಿ ಉಮೇಶ್ ರೆಡ್ಡಿ ವಿರುದ್ದ  ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಇದೀಗ ಖಾಯಂಗೊಳಿಸಿ ಹೈಕೋರ್ಟ್  ಮಹತ್ವದ ಆದೇಶ ನೀಡಿದೆ.

 

ಬೆಂಗಳೂರಿನಲ್ಲಿ ವಿಧವೆಯೊಬ್ಬರ  ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ  ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯ 2006ರಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು.  ಈ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲು ಮನವಿ ಮಾಡಿ   ಉಮೇಶ್ ರೆಡ್ಡಿ ಸಲ್ಲಿಸಿದ್ದ  ಅರ್ಜಿಯನ್ನು  ನ್ಯಾ.ಅರವಿಂದ್ ಕುಮಾರ್ ಹಾಗೂ ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿ, ಶಿಕ್ಷೆ ಖಾಯಂಗೊಳಿಸಿದೆ.

 

ಅಪರಾಧಿ ಉಮೇಶ್ ರೆಡ್ಡಿ ಪರ ವಕೀಲರಾದ  ಬಿ.ಎನ್.ಜಗದೀಶ್ ಅವರು  ಸುಪ್ರೀಂಕೋರ್ಟ್ ಗೆ  ಮೇಲ್ಮನವಿಯನ್ನು  ಸಲ್ಲಿಸಲು ಕಾಲಾವಕಾಶ ಕೋರಿದ್ದನ್ನು  ಹೈಕೋರ್ಟ್ ಪರಿಗಣಿಸಿ  ಮೇಲ್ಮನವಿ ಸಲ್ಲಿಸಲು  ಆರು ವಾರ ಕಾಲಾವಕಾಶವನ್ನು  ನೀಡಿದೆ.

 

1998ರಲ್ಲಿ  ಬೆಂಗಳೂರಿ‌ನ ಪೀಣ್ಯಾದಲ್ಲಿ  ಜಯಶ್ರೀ ಎಂಬ ವಿಧವೆಯೊಬ್ಬರ  ಮೇಲೆ  ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಆರೋಪದಲ್ಲಿ  ನಗರದ ಸೆಷನ್ಸ್ ನ್ಯಾಯಾಲಯ  2006ರಲ್ಲಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು.

 

 ಈ ಆದೇಶವನ್ನು  ಪ್ರಶ್ನಿಸಿ  ಹೈಕೋರ್ಟ್ ಗೆ  ಸಲ್ಲಿಸಿದ್ದ ಅರ್ಜಿಯು  ವಜಾವಾಗಿತ್ತು. ಬಳಿಕ ಸುಪ್ರೀಂಕೋರ್ಟ್ ಗೆ  ಸಲ್ಲಿಸಿದ್ದ ಮೇಲ್ಮನವಿಯು ವಜಾಗೊಂಡು, ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿಯಲಾಗಿತ್ತು.ಆ  ನಂತರ ಉಮೇಶ್ ರೆಡ್ಡಿ ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಮನವಿಯನ್ನು ಮಾಡಿದ್ದ. ಅರ್ಜಿ ಪರಿಶೀಲಿಸಿದ ರಾಷ್ಟ್ರಪತಿಗಳು  2013ರಲ್ಲಿ ಅರ್ಜಿಯನ್ನು ತಿರಸ್ಕರಿಸಿದ್ದರು.  ಇದೀಗ ಈ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲು ಮನವಿ ಮಾಡಿ   ಉಮೇಶ್ ರೆಡ್ಡಿ ಸಲ್ಲಿಸಿದ್ದ  ಅರ್ಜಿಯನ್ನು  ನ್ಯಾ.ಅರವಿಂದ್ ಕುಮಾರ್ ಹಾಗೂ ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿ, ಶಿಕ್ಷೆ ಖಾಯಂಗೊಳಿಸಿದೆ.

 

ಸೈಕೋಪಾತ್ ಉಮೇಶ್ ರೆಡ್ಡಿ ಭಯಾನಕ ಕಥೆ  ಈ ವಿಡಿಯೋದಲ್ಲಿ ನೋಡಿ