-->
ಲೈಂಗಿಕ ಸಂಭೋಗ ಅಥವಾ ಆಹಾರ ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದೆಂಬ ಪ್ರಶ್ನೆಗೆ ಶ್ರುತಿ ಹಾಸನ್ ಖಡಕ್ ಉತ್ತರ!

ಲೈಂಗಿಕ ಸಂಭೋಗ ಅಥವಾ ಆಹಾರ ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದೆಂಬ ಪ್ರಶ್ನೆಗೆ ಶ್ರುತಿ ಹಾಸನ್ ಖಡಕ್ ಉತ್ತರ!

ಚೆನ್ನೈ: ಸೆಲೆಬ್ರಿಟಿಗಳಲ್ಲಿ ಹೆಚ್ಚಿನವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದಾರೆ. ಅಂತವರಲ್ಲಿ ನಟಿ ಶ್ರುತಿ ಹಾಸನ್​ ಕೂಡ ಓರ್ವರು. ಅಲ್ಲದೆ ಶ್ರುತಿ ಹಾಸನ್ ಅವರು ಆಗಾಗ ತಮ್ಮ ಅಭಿಮಾನಿಗಳ ಜೊತೆ ತಮ್ಮ ಹಲವು ಸಂಗತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅವರು ತಮ್ಮ ಸೌಂದರ್ಯ, ಮಾದಕತೆ ಹಾಗೂ ನೃತ್ಯದಿಂದ​​ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಜೊತೆಗೆ ಶ್ರುತಿ ಬೋಲ್ಡ್​ ಹೇಳಿಕೆಗಳಿಂದಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 

ಇತ್ತೀಚೆಗೆ ಮಾಧ್ಯಮವೊಂದರಲ್ಲಿ ನಡೆದ ಸಂದರ್ಶನದಲ್ಲಿ ಶ್ರುತಿಗೆ, ಲೈಂಗಿಕ ಸಂಭೋಗ ಅಥವಾ ಆಹಾರ ಇವೆರಡರಲ್ಲಿ ಆಯ್ಕೆ ಮಾಡಿಕೊಳ್ಳುವುದಾದರೆ, ಯಾವುದನ್ನು ಆಯ್ಕೆ ಮಾಡುತ್ತೀರಿ ಎಂಬ ಬೋಲ್ಡ್​ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಇದಕ್ಕೆ ಶ್ರುತಿ ಹಾಸನ್ ನೀಡಿರುವ ಉತ್ತರವು ವೈರಲ್​ ಆಗಿದೆ. "ನೀವು ಆಹಾರ ಮತ್ತು ಲೈಂಗಿಕತೆಯನ್ನು ಯಾಕೆ ಹೋಲಿಕೆ ಮಾಡುತ್ತೀರಿ. ಆಹಾರವಿಲ್ಲದಿದ್ದಲ್ಲಿ ನಾವೆಲ್ಲ ಸಾಯುತ್ತೇವೆ. ಆದರೆ, ಲೈಂಗಿಕ ಸಂಭೋಗ ಮಾಡದಿದ್ದಲ್ಲಿ, ಯಾರೂ ಸಾಯುವುದಿಲ್ಲ. ಆದ್ದರಿಂದ ಆಹಾರವೇ ಮುಖ್ಯ ಎಂದು ಶ್ರುತಿ ಉತ್ತರ ನೀಡಿದ್ದಾರೆ. ಶ್ರುತಿಯ ಈ ಉತ್ತರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನು ಶ್ರುತಿ ಹಾಸನ್ ಸಿನಿಮಾ ವಿಚಾರವನ್ನು ನೋಡುವುದಾದಲ್ಲಿ  ಕೊನೆಯದಾಗಿ ಆಕೆ ಪವನ್​ ಕಲ್ಯಾಣ್​ ನಟನೆಯ ವಕೀಲ್​ ಸಾಬ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.​ ಸದ್ಯ ಪ್ರಭಾಸ್​ ಅಭಿನಯದ ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಇದರಲ್ಲಿ ಜರ್ನಲಿಸ್ಟ್​ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರವನ್ನು ವಿಜಯ್​ ಕಿರಂಗದೂರ್​ ಹೊಂಬಾಳೆ ಬ್ಯಾನರ್​ ಅಡಿಯಲ್ಲಿ ಏಕಕಾಲದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರೀಕರಿಸಲಾಗುತ್ತಿದೆ. ಹಿಂದಿ, ತಮಿಳು ಮತ್ತು ಮಲಯಳಂಗಳಲ್ಲೂ ಸಿನಿಮಾ ಡಬ್​ ಆಗಲಿದ್ದು, ಇದೊಂದು ಬಿಗ್​ ಬಜೆಟ್​ ಪ್ಯಾನ್​ ಇಂಡಿಯಾ ಸಿನಿಮಾ ಆಗಿದೆ. 

Ads on article

Advertise in articles 1

advertising articles 2

Advertise under the article