-->
School begins in DK- ಸೆಪ್ಟಂಬರ್ 17ರಿಂದ ಶಾಲೆಗಳ ಆರಂಭ: ಜಿಲ್ಲಾಧಿಕಾರಿ ಆದೇಶ ನಿರ್ಧಾರಕ್ಕೆ ಖಾಸಗಿ ಶಾಲಾಡಳಿತ ಒಕ್ಕೂಟ ಸ್ವಾಗತ

School begins in DK- ಸೆಪ್ಟಂಬರ್ 17ರಿಂದ ಶಾಲೆಗಳ ಆರಂಭ: ಜಿಲ್ಲಾಧಿಕಾರಿ ಆದೇಶ ನಿರ್ಧಾರಕ್ಕೆ ಖಾಸಗಿ ಶಾಲಾಡಳಿತ ಒಕ್ಕೂಟ ಸ್ವಾಗತ

ಸೆಪ್ಟಂಬರ್ 17ರಿಂದ ಶಾಲೆಗಳ ಆರಂಭ: ಜಿಲ್ಲಾಧಿಕಾರಿ ಆದೇಶ ನಿರ್ಧಾರಕ್ಕೆ ಖಾಸಗಿ ಶಾಲಾಡಳಿತ ಒಕ್ಕೂಟ ಸ್ವಾಗತ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟಂಬರ್ 17ರಿಂದ ಹೈಸ್ಕೂಲ್ ತರಗತಿಗಳು ನಡೆಯಲಿದ್ದು, ಹೈಸ್ಕೂಲ್‌ ಎಂದಿನ ಸಹಜ ಶೈಕ್ಷಣಿಕ ಚಟುವಟಿಕೆ ನಡೆಸಲಿವೆ.ಈ ವಾರದ ಶುಕ್ರವಾರದಿಂದ 8 ರಿಂದ 10 ನೇ ತರಗತಿಗಳನ್ನು ಆರಂಭಿಸಲು ಜಿಲ್ಲಾಡಳಿತ ಹಸಿರು ನಿಶಾನೆ ನೀಡಿದ್ದು, ಅಧಿಕೃತ ಆದೇಶ ಹೊರಡಿಸಿದೆ.ಅದರಂತೆ ಶಾಲೆಗಳ ಆರಂಭ ಮಾಡಲಾಗುವುದು ಎಂದು ದ. ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಮತ್ತು ಉಪಾಧ್ಯಕ್ಷ ಮಂಜುನಾಥ ರೇವಣಕರ್ ಹೇಳಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರ ಜೊತೆಗೆ ಖಾಸಗಿ ಶಾಲೆಗಳ ಆಡಳಿತ ನಡೆಸಿದ ಸಭೆಯ ಬಗ್ಗೆ ವಿವರ ನೀಡಿದ ಅವರು, 6ನೇ ಮತ್ತು 7ನೇ ತರಗತಿಗಳನ್ನು ಮುಂದಿನ ಸೋಮವಾರದಿಂದ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.ಆದರೆ, ಕಿಂಡರಿಗಾರ್ಟನ್, 1ರಿಂದ 5ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮಾತ್ರ ಸದ್ಯಕ್ಕೆ ಆನ್‌ಲೈನ್ ಅಥವಾ ಆಫ್‌ಲೈನ್ ಶಿಕ್ಷಣ ಮುಂದುವರಿಯಲಿದೆ. 


ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಮತ್ತು ಮಾರ್ಗಸೂಚಿ ಪ್ರಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು, ಜಿಲ್ಲಾಡಳಿತದ ನಿರ್ಧಾರವನ್ನು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸ್ವಾಗತಿಸಿದೆ ಎಂದು ತಿಳಿಸಿದ್ದಾರೆ.Ads on article

Advertise in articles 1

advertising articles 2

Advertise under the article

holige copy 1.jpg