ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7 FE Wi-Fi ಎಸ್ ಪೆನ್‌ನೊಂದಿಗೆ ಭಾರತದಲ್ಲಿ ರಿಲೀಸ್

ನವದೆಹಲಿ: ಸ್ಯಾಮ್ ಸಂಗ್ ಸಂಸ್ಥೆಯು ಭಾರತದಲ್ಲಿ ಗ್ಯಾಲಕ್ಸಿ ಟ್ಯಾಬ್ S7 FE ವೈ-ಫೈಯನ್ನು ರಿಲೀಸ್ ಮಾಡಿದೆ. ಸೃಜನಶೀಲತೆ ಮತ್ತು ಮನರಂಜನೆಗಾಗಿಯೇ ಈ ಗ್ಯಾಲಕ್ಸಿ ಟ್ಯಾಬ್ ಎಸ್7 ಎಫ್ಇ ವೈ-ಫೈ ಅನ್ನು  ವಿನ್ಯಾಸಗೊಳಿಸಲಾಗಿದೆ. ಈ ಟ್ಯಾಬ್ ದೈನಂದಿನ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತದೆ. 

ಗ್ಯಾಲಕ್ಸಿ ಟ್ಯಾಬ್ ಎಸ್7 FE ವೈ-ಫೈ 12.4 ಇಂಚಿನ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಈ ಟ್ಯಾಬ್ ನಲ್ಲಿರುವ ಇನ್-ಬಾಕ್ಸ್ ಎಸ್ ಪೆನ್ ನಿಜವಾದ ಪೆನ್ ಪೇಪರ್ ಅನುಭವವನ್ನು ನೀಡುತ್ತದೆ. ಇದು ಸುಲಭವಾಗಿ ಟಿಪ್ಪಣಿ ಮಾಡಿಕೊಳ್ಳಲು ಸಹಕಾರಿಯಾಗಿದೆ. 

ಅಲ್ಲದೆ ಇದು ಕ್ಲಿಪ್ ಸ್ಟುಡಿಯೋ ಮತ್ತು ಕ್ಯಾನ್ವಾ ಸೇರಿದಂತೆ ಹಲವು ಪ್ರೀಮಿಯಂ ಸಾಫ್ಟ್‌ವೇರ್ ಚಂದಾವನ್ನು ಹೊಂದಿದೆ. ಈ ಟ್ಯಾಬ್‌ 10090 ಎಂಎಎಚ್ ಮೆಗಾ ಬ್ಯಾಟರಿಯನ್ನು ಹೊಂದಿದ್ದು, ಪೂರ್ಣ ದಿನದ ಕೆಲಸ ಅಥವಾ ಆನ್‌ಲೈನ್ ತರಗತಿಗಳ ಬಳಿಕವೂ ಕೆಲಸ ಮಾಡಲು ಲಭ್ಯವಿರುತ್ತದೆ. ಗ್ಯಾಲಕ್ಸಿ ಟ್ಯಾಬ್ ಎಸ್7 ಎಫ್ಇ ವೈಫೈ ಸ್ಪೋರ್ಟ್ಸ್ ಶಕ್ತಿಯುತ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778ಜಿ ಪ್ರೊಸೆಸರ್ ಅನ್ನು ಹೊಂದಿದೆ. ಹೊಂದಿದೆ.  

ಸ್ಯಾಮ್‌ಸಂಗ್ ಡಿಎಕ್ಸ್ ಮತ್ತು ಬುಕ್ ಕವರ್ ಕೀಬೋರ್ಡ್‌ನೊಂದಿಗೆ, ಈ ಟ್ಯಾಬ್ಲೆಟ್‌ ಅನ್ನು ಲ್ಯಾಪ್‌ಟಾಪ್ ಆಗಿಯೂ ಬಳಸಲು ಅನುಕೂಲ ಮಾಡಲಾಗಿದೆ. ಇದು ಬಳಕೆದಾರರ ದೈನಂದಿನ ಟಾಸ್ಕ್ ಲಿಸ್ಟ್ ಮೂಲಕ ಪವರ್-ತರಹದ ಅನುಭವವನ್ನು ಯುಐ ಅನ್ನು ಪಿಸಿ ತರಹದ ಅನುಭವಕ್ಕೆ ಪರಿವರ್ತಿಸುತ್ತದೆ.  

ಮಿಸ್ಟಿಕ್ ಬ್ಲಾಕ್, ಮಿಸ್ಟಿಕ್ ಸಿಲ್ವರ್, ಮಿಸ್ಟಿಕ್ ಗ್ರೀನ್ ಮತ್ತು ಮಿಸ್ಟಿಕ್ ಪಿಂಕ್ ಹೀಗೆ ನಾಲ್ಕು ಬಣ್ಣಗಳಲ್ಲಿ ಈ ಟ್ಯಾಬ್ ಲಭ್ಯವಿದೆ. ಗ್ಯಾಲಕ್ಸಿ ಟ್ಯಾಬ್ ಎಸ್7 ಎಫ್ಇ ವೈಫೈ 4ಜಿಬಿ + 64ಜಿಬಿ ಇದ್ದು, 41,999 ರೂ. ಮೌಲ್ಯದ್ದಾಗಿದೆ. Samsung.com, Amazon.in ಆನ್ಲೈನ್ ಮೂಲಕ ಹಾಗೂ ಆಯ್ದ ಇಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಲಭ್ಯವಿದೆ.