National Level Quiz- ರಾಷ್ಟ್ರೀಯ ನಾಲೆಜ್ ಕ್ವಿಝ್ ಸ್ಪರ್ಧೆ: ಫಲಿತಾಂಶದಲ್ಲಿ ಆಳ್ವಾಸ್ ಪಾರಮ್ಯ



ರಾಷ್ಟ್ರೀಯ ಮಟ್ಟದ ನಾಲೆಜ್ ಕ್ವಿಝ್ ಸ್ಪರ್ಧೆಯಲ್ಲಿ ಆಳ್ವಾಸ್ ಪಾರಮ್ಯ ಮೆರೆದಿದೆ. 



Bharath Gajanan

ಆಳ್ವಾಸ್ ಕಾಲೇಜ್‌ ಎಂಕಾಂ ಜನರಲ್ ಹಾಗೂ ಐಬಿಎಂ ವಿಭಾಗದ ವತಿಯಿಂದ ತೃತೀಯ ವರ್ಷದ ಬಿ.ಕಾಂ. ಹಾಗೂ ಬಿಬಿಎ ವಿದ್ಯಾರ್ಥಿಗಳಿಗಾಗಿ ನಡೆದ ರಾಷ್ಟ್ರೀಯ ಕ್ವಿಜ್ ನಲ್ಲಿ ಆಳ್ವಾಸ್‌ ಈ ಸಾಧನೆ ಮಾಡಿದೆ.


Sumukha K

Soujanya Jain



ಆಳ್ವಾಸ್ ಕಾಲೇಜ್‌ನ ಭರತ್ ಗಜಾನನ ಹೆಗ್ಡೆ ಕ್ವಿಜ್‌ನ ಪ್ರಥಮ ಬಹುಮಾನ ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಮಣಿಪಾಲದ ಉಡುಪಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಟೂರಿಸಂ ಸಯನ್ಸ್ ನ ಸುಮುಖ ಕೆ, ತೃತೀಯ ಸ್ಥಾನವನ್ನು ಆಳ್ವಾಸ್ ಕಾಲೇಜಿನ ಸೌಜನ್ಯಾ ಜೈನ್ ಪಡೆದುಕೊಂಡಿದ್ದಾರೆ.



ಕ್ವಿಜ್‌ ಸ್ಪರ್ಧೆಗೆ ವಿವಿಧ ಕಾಲೇಜುಗಳ ಸುಮಾರು 250 ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದರು. ರಾಷ್ಟ್ರೀಯ ಕ್ವಿಜ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗ ಸಂಯೋಜಕಿ ರೇಖಾ ಶೆಟ್ಟಿ ಹಾಜರಿದ್ದು, ಸ್ಪರ್ಧೆಯಲ್ಲಿ ಭಾಗಿಯಾದ ಹಾಗೂ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.