Love Jihad in Mangaluru? - ಚಿನ್ನಾಭರಣ, ಹಣದೊಂದಿಗೆ ಯುವತಿ ನಾಪತ್ತೆ ಪ್ರಕರಣ: ಲವ್ ಜಿಹಾದ್ ಎಂದ ವಿಹಿಂಪ



ನಿಶ್ಚಿತಾರ್ಥಗೊಂಡ ಮಂಗಳೂರು ಬಲ್ಲಾಳ್ ಭಾಗ್ ನ ಅಪಾರ್ಟ್ಮೆಂಟ್ ನಿವಾಸಿ ಯುವತಿ ಲಕ್ಷಂತಾರ ಮೌಲ್ಯದ ಚಿನ್ನಾಭರಣ ಮತ್ತು ಹಣದೊಂದಿಗೆ ನಾಪತ್ತೆ


ಬರ್ಕೆ ಠಾಣೆಯಲ್ಲಿ ದೂರು ದಾಖಲು


ಇದೊಂದು ಲವ್ ಜಿಹಾದ್ ಪ್ರಕರಣ- ಆರೋಪಿಯನ್ನು ಶೀಘ್ರ ಬಂಧನಕ್ಕೆ ವಿಶ್ವ ಹಿಂದು ಪರಿಷದ್ ಆಗ್ರಹ





ಮಂಗಳೂರು ನಗರದ ಬಲ್ಲಾಳ್ ಭಾಗ್ ನ ಅಪಾರ್ಟ್ಮೆಂಟ್ ನಿವಾಸಿ ರೇಶ್ಮಾ ಲಕ್ಷಂತಾರ ಮೌಲ್ಯದ ಚಿನ್ನಾಭರಣದೊಂದಿಗೆ ನಾಪತ್ತೆಯಾಗಿದ್ದು ತಂದೆತಾಯಿ ಕಷ್ಟಪಟ್ಟು ಕೂಲಿ ಮಾಡಿ ಕೂಡಿಟ್ಟ ತೊಂಬತ್ತು ಸಾವಿರ ಹಣವನ್ನು ಅಕ್ಬರ್ ಅಲಿ ಎನ್ನುವ ವ್ಯಕ್ತಿಗೆ ವರ್ಗಾಯಿಸಿದ್ದಾರೆ.



ಇದೊಂದು ಲವು ಜಿಹಾದ್ ಪ್ರಕರವೆಂದು ಸ್ಪಷ್ಟವಾಗಿ ಗೋಚರವಾಗುತ್ತಿದ್ದೆ. ಈ ಪ್ರಕಾರವನ್ನು ವಿಶ್ವ ಹಿಂದು ಪರಿಷತ್ ಖಂಡಿಸುತ್ತದೆ. ವಿಶ್ವ ಹಿಂದು ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ಜಿಲ್ಲಾ ಬಜರಂಗದಳ ಸಂಚಾಲಕ್ ಪುನೀತ್ ಅತ್ತಾವರ ಭೇಟಿ ನೀಡಿ ನಾಪತ್ತೆಯಾದ ರೇಶ್ಮಾ ಮನೆಗೆ ಭೇಟಿ ನೀಡಿ ಹೆತ್ತವರಿಗೆ ಧೈರ್ಯ ತುಂಬಿದರು.


ಇದನ್ನು ಓದಿ: ಮಂಗಳೂರಿನಲ್ಲಿ ನಿಶ್ಚಿತಾರ್ಥವಾಗಿದ್ದ 21 ವರ್ಷದ ಯುವತಿ ನಾಪತ್ತೆ- ಯುವಕನ ಕಡೆಯವರು ನೀಡಿದ ಬಂಗಾರದ ಜೊತೆಗೆ ಪರಾರಿ- ಅಕ್ಬರ್ ಅಲಿ ಗೆ 90 ಸಾವಿರ ಟ್ರಾನ್ಸ್ ಫರ್!

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಪತ್ತೆಹಚ್ಚಿ ಹೆತ್ತವರಿಗೆ ನ್ಯಾಯ ಒದಗಿಸಲು ಪೊಲೀಸ್ ಇಲಾಖೆಗೆ ವಿಶ್ವ ಹಿಂದು ಪರಿಷತ್ ಆಗ್ರಹಿಸುತ್ತದೆ ಎಂದು ಜಿಲ್ಲಾ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ತಿಳಿಸಿದರು. 

BREAKING NEWS
Loading latest news...
Join our WhatsApp Channel Powered By : Online Pudu