-->
ಬ್ಯೂಟಿಶಿಯನ್ ಆಗಲು ಬಂದ ಮಣಿಪುರ ಯುವತಿ ಪೊಲೀಸ್ ಅತಿಥಿಯಾದಳು: ಆಕೆ ಮಾಡಿದ ತಪ್ಪಾದರೂ ಏನು?

ಬ್ಯೂಟಿಶಿಯನ್ ಆಗಲು ಬಂದ ಮಣಿಪುರ ಯುವತಿ ಪೊಲೀಸ್ ಅತಿಥಿಯಾದಳು: ಆಕೆ ಮಾಡಿದ ತಪ್ಪಾದರೂ ಏನು?

ಬೆಂಗಳೂರು: ನಗರದಲ್ಲಿ ಬ್ಯೂಟಿಶಿಯನ್ ಆಗಿದ್ದ ಯುವತಿ ಸೇರಿದಂತೆ ಆತನ ಜೊತೆಗಾರನನ್ನು ಬಾಣಸವಾಡಿ ಪೊಲೀಸರು ಮಾದಕವಸ್ತು ಮಾರಾಟ ಮಾಡುತ್ತಿರರುವ ಆರೋಪದಲ್ಲಿ   ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳಲ್ಲಿ ಮಣಿಪುರ ಮೂಲದ ಯುವತಿ ಹೆರಾಯಿನ್ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಳು ಎನ್ನಲಾಗಿದೆ.

ಈ ಇಬ್ಬರು ಅಂತರಾಜ್ಯ ಪೆಡ್ಲರ್ ಗಳಲ್ಲಿ ಯುವತಿಯು ಬ್ಯೂಟಿಶಿಯನ್ ಕೆಲಸಕ್ಕೆಂದು ಮಣಿಪುರದಿಂದ ಬೆಂಗಳೂರಿಗೆ ಬಂದಿದ್ದಳು. ಆದರೆ ಇಲ್ಲಿ ಸುಲಭವಾಗಿ ಹಣ ಸಂಪಾದನೆ ಮಾಡಲೆಂದು ಡ್ರಗ್ಸ್ ದಂಧೆಗೆ ಇಳಿದಿದ್ದಾಳೆ ಎನ್ನಲಾಗಿದೆ. ಈಕೆ ಕಮ್ಮನಹಳ್ಳಿಯಲ್ಲಿರುವ ಬ್ಯೂಟಿ ಆ್ಯಂಡ್ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಸ್ನೇಹಿತನ ಜೊತೆ ಸೇರಿ ಹೆರಾಯಿನ್ ಮಾರಾಟ ಮಾಡಿದ್ದಳು ಎಂದು ಆರೋಪಿಸಿ ಪೊಲೀಸರು ಬಂಧಿಸಿದ್ದಾರೆ.

ಸದ್ಯ ಇಬ್ಬರನ್ನು ಬಂಧಿಸಿರುವ ಬಾಣಸವಾಡಿ ಪೊಲೀಸರು ಆರೋಪಿಗಳಿಂದ 1.5 ಲಕ್ಷ ರೂ. ಮೌಲ್ಯದ 10 ಗ್ರಾಂ ಹೆರಾಯಿನ್ ಅನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article