ಮಂಗಳೂರು: ಕೃಷಿ ಅಧ್ಯಯನಕ್ಕೆ ಫಾರ್ಮ್ ಹೌಸ್ ಗೆ ಬಂದಿದ್ದ ವೈದ್ಯೆ ಕೆರೆಯಲ್ಲಿ ಮುಳುಗಿ ಮೃತ್ಯು

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ವಾರಾಣಸಿ ಫಾರ್ಮ್ ಹೌಸ್​​​ನ ಕೆರೆಯಲ್ಲಿ  ಮುಳುಗಿ ಮಂಗಳೂರಿನ ವೈದ್ಯೆಯೋರ್ವರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.

ಮೈಜಿ ಕರೋಲ್ ಫರ್ನಾಂಡಿಸ್ (31) ಮೃತಪಟ್ಟ ದುರ್ದೈವಿ.

ಕೃಷಿಯ ಬಗ್ಗೆ ಆಸಕ್ತಿ ಹೊಂದಿರುವ ಮೈಜಿ ಕರೋಲ್ ಫರ್ನಾಂಡಿಸ್ ಹೊಂದಿದ್ದ ವಾರಾಣಸಿ ಫಾರ್ಮ್ ಹೌಸ್​​​ಗೆ ಕೃಷಿ ಅಧ್ಯಯನಕ್ಕೆ ಬಂದಿದ್ದರು. ಆದರೆ ಸಂಜೆ ಫಾರ್ಮ್ ಹೌಸ್​​​ನಲ್ಲಿ ಯಾರೂ ಇಲ್ಲದ ಸಮಯ ಕೆರೆಯಲ್ಲಿ ಈಜಲು ಹೋಗಿ ಅವರು ಮುಳುಗಿದ್ದಾರೆ. ತಕ್ಷಣ ಅವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಬಳಿಕ ಮಂಗಳೂರಿನ ಖಾಸಗಿ ಆಸ್ವತ್ರೆಗೆ ಕರೆದುಕೊಂಡು ಹೋದರೂ ವೈದ್ಯರು ತಪಾಸಣೆ ಮಾಡಿ ಇಂದು ಬೆಳಗ್ಗೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.