-->
ಪ್ರೀತಿಸಿ ಮದುವೆಯಾದವಳು ಪಕ್ಕದ ಮನೆಯವನ ಜತೆ ಪರಾರಿ...ಮನನೊಂದ ಗಂಡ ಆತ್ಮಹತ್ಯೆಗೆ ಶರಣು..

ಪ್ರೀತಿಸಿ ಮದುವೆಯಾದವಳು ಪಕ್ಕದ ಮನೆಯವನ ಜತೆ ಪರಾರಿ...ಮನನೊಂದ ಗಂಡ ಆತ್ಮಹತ್ಯೆಗೆ ಶರಣು..

 ವಿಜಯಪುರ: ಪ್ರೀತಿಸಿ ಮದುವೆಯಾದವಳು ಪಕ್ಕದ ಮನೆಯವನ ಜತೆ ಎಸ್ಕೇಪ್​ ಆಗಿದ್ದಾಳೆ ಎಂಬ ಕಾರಣಕ್ಕೆ 
ಮನನೊಂದ ಗಂಡ ಇದೀಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. 

ವೆಂಕಟೇಶ ದೋರನಹಳ್ಳಿ (25) ಆತ್ಮಹತ್ಯೆ ಶರಣಾಗಿರುವ ವ್ಯಕ್ತಿ. ಸಾವಿಗೂ ಮುನ್ನ ವೆಂಕಟೇಶ್​ ಫೇಸ್​ಬುಕ್​ನಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟು ನೇಣಿಗೆ ಶರಣಾಗಿದ್ದಾನೆ. ಎರಡು ವರ್ಷಗಳ ಹಿಂದೆ ವೆಂಕಟೇಶ್​ ಮತ್ತು ಯುವತಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ವೆಂಕಟೇಶ್​ ಪಕ್ಕದ ಮನೆಯ ಸೋದರ ಸಂಬಂಧಿ ಶ್ರೀಶೈಲ್ ದೋರನಹಳ್ಳಿ ಎಂಬುವನ ಜೊತೆಗೆ ಯುವತಿ ಎಸ್ಕೇಪ್ ಆಗಿದ್ದಾಳೆಂದು ಆರೋಪಿಸಲಾಗಿದೆ. ಈ ಸಂಬಂಧ ವೆಂಕಟೇಶ್​ ತಾಳಿಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದ. ದೂರು ನೀಡಿದರೂ ವೆಂಕಟೇಶ್​ ಜತೆ ಇರೊಲ್ಲ, ಪ್ರಿಯಕರ ಶ್ರೀಶೈಲ್ ಜತೆ ಇರುವುದಾಗಿ ಯುವತಿ ಹೇಳಿದ್ದಾಳೆ. ಹೀಗಾಗಿ ಅವಮಾನ ಸಹಿಸದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಈ ಘಟನೆ ಸಂಬಂಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article