-->

Bantwala Ganeshotsava - ಬಂಟ್ವಾಳ ಗಣೇಶೋತ್ಸವಕ್ಕೆ 18 ವರ್ಷಗಳ ಭವ್ಯ ಇತಿಹಾಸ: ರಮಾನಾಥ ರೈ ನೇತೃತ್ವದ ಈ ಸಂಭ್ರಮದ ಹಿಂದಿನ ವಿಶೇಷ ಏನು ಗೊತ್ತೇ..?

Bantwala Ganeshotsava - ಬಂಟ್ವಾಳ ಗಣೇಶೋತ್ಸವಕ್ಕೆ 18 ವರ್ಷಗಳ ಭವ್ಯ ಇತಿಹಾಸ: ರಮಾನಾಥ ರೈ ನೇತೃತ್ವದ ಈ ಸಂಭ್ರಮದ ಹಿಂದಿನ ವಿಶೇಷ ಏನು ಗೊತ್ತೇ..?

ಬಂಟ್ವಾಳ ಗಣೇಶೋತ್ಸವಕ್ಕೆ 18 ವರ್ಷಗಳ ಭವ್ಯ ಇತಿಹಾಸ: ರಮಾನಾಥ ರೈ ನೇತೃತ್ವದ ಈ ಸಂಭ್ರಮದ ಹಿಂದಿನ ವಿಶೇಷ ಏನು ಗೊತ್ತೇ..?





ಬಂಟ್ವಾಳದ ಜಕ್ರಿಬೆಟ್ಟು ವಿನಲ್ಲಿ ಕಳೆದ 18 ವರ್ಷಗಳಿಂದ ಮಾಜಿ ಸಚಿವ ಬಿ . ರಮಾನಾಥ ರೈ ನೇತೃತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.


Video:




ಈ ಗಣೇಶೋತ್ಸವಕ್ಕೆ ಹಲವಾರು ವಿಶೇಷತೆಗಳಿವೆ. ಸ್ವಾತಂತ್ರ್ಯ ಹೋರಾಟಗಾರರಾದ ತಿಲಕ್ ಗಣೇಶೋತ್ಸವ ಆರಂಭಿಸಿದಾಗ ದೇಶದ ಜನರಲ್ಲಿ ಒಗ್ಗಟ್ಟಿನ ಮಂತ್ರ ಹಾಗೂ ಸಾಮಾಜಿಕ ಸೌಹಾರ್ದತೆ ಮೂಡಬೇಕು ಎಂಬ ಪ್ರಮುಖ ಉದ್ದೇಶ ಹೊಂದಿದ್ದರು.



ಬಂಟ್ವಾಳದಲ್ಲಿ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಆಚರಿಸಲಾಗುತ್ತಿರುವ ಗಣೇಶೋತ್ಸವ ಕಳೆದ 18 ವರ್ಷಗಳಿಂದ ಸಾಮಾಜಿಕ ಸೌಹಾರ್ದತೆಗೆ ಒತ್ತು ನೀಡಿ ಗಣೇಶೋತ್ಸವನ್ನು ಜಾತಿಮತಗಳ ಭೇದವಿಲ್ಲದೆ ಸರ್ವರ ಪಾಲ್ಗೊಳ್ಳುವಿಕೆಯಿಂದ ನಡೆಸಿದೆ. ಇದು ಗಣೇಶೋತ್ಸವದ ನಿಜವಾದ ಉದ್ದೇಶವನ್ನು ಸಾಕಾರಗೊಳಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.




ದೇಶದ ಎಲ್ಲೂ ಈ ರೀತಿಯ ಸಾಮಾಜಿಕ ಸೌಹಾರ್ದತೆಗೆ ಒತ್ತು ನೀಡಿರುವ ಗಣೇಶೋತ್ಸವ ಕಂಡು ಬರಲು ಸಾಧ್ಯವಿಲ್ಲ. ಅಂತಹ ವಿಶೇಷ ಮಹತ್ವವನ್ನು ನೀಡಿ, ಸತತ 18 ವರ್ಷಗಳಿಂದ ಶ್ರದ್ಧಾ ಭಕ್ತಿಯಿಂದ ಈ ಉತ್ಸವವನ್ನು ನಡೆಸಿಕೊಂಡು ಬಂದಿದ್ದಾರೆ.













ಓರ್ವ ಮಾಜಿ ಸಚಿವರಾಗಿ, ಆರು ಬಾರಿ ಶಾಸಕರಾಗಿ ಈ ಗಣೇಶೋತ್ಸವಕ್ಕೆ ರಮಾನಾಥ ರೈ ತೆಗೆದುಕೊಳ್ಳುತ್ತಿರುವ ಆಸಕ್ತಿ ಸರ್ವರು ಮೆಚ್ಚುವಂತದ್ದು.



ಈ ಬಗ್ಗೆ ಗಣೇಶೋತ್ಸವವನ್ನು ಆಯೋಜಿಸುವ ಕಾರ್ಯಕರ್ತರು ಮೆಚ್ಚುಗೆಯ ನುಡಿಗಳನ್ನು ಆಡುತ್ತಾರೆ. ಪ್ರತಿಬಾರಿ ಇದರ ಬಗ್ಗೆ ಆಸಕ್ತಿ ತೆಗೆದುಕೊಂಡು ಅದನ್ನು ನಡೆಸುವ ರೀತಿ ಅವರಿಗೆ ಗಣೇಶನ ಬಗ್ಗೆ ಇರುವ ಶ್ರದ್ಧಾ ಭಕ್ತಿಯನ್ನು ತೋರ್ಪಡಿಸುತ್ತದೆ.



ದೇವರ ಬಗ್ಗೆ ಅತೀವ ಶೃದ್ಧೆ ಮತ್ತು ಭಕ್ತಿಯನ್ನು ಹೊಂದಿರುವ ರಮನಾಥ ರೈ ಅದನ್ನು ತನ್ನ ಕಾರ್ಯದಲ್ಲೂ ತೋರ್ಪಡಿಸಿದ್ದಾರೆ. ಆ ಮೂಲಕ ಕಳೆದ 18 ವರ್ಷಗಳಿಂದ ನಿರ್ವಿಘ್ನವಾಗಿ , ಧಾರ್ಮಿಕ ವಿಧಿ ವಿಧಾನಗಳ ಮೂಲಕ ಬಹಳಷ್ಟು ಭಕ್ತಿಭಾವದಿಂದ ಆಚರಿಸಿಕೊಂಡು ಬಂದಿದ್ದಾರೆ.



ಪ್ರತಿಬಾರಿಯ ಗಣೇಶೋತ್ಸವ ನನಗೆ ಬಹಳಷ್ಟು ಆತ್ಮತೃಪ್ತಿಯನ್ನು ತರುತ್ತದೆ ಎಂಬ ಮಾತುಗಳನ್ನು ಅವರು ನುಡಿಯುತ್ತಾರೆ. ಇದು ಅವರ ಶ್ರದ್ಧಾ ಭಕ್ತಿಗೆ ಹಿಡಿದಿರುವ ಕನ್ನಡಿಯಾಗಿದೆ. ಈ ಕಾರ್ಯಕ್ರಮದ ಮೂಲಕ ಸರ್ವ ಜಾತಿ ಜನಾಂಗವನ್ನು ಬೆಸೆಯುವ ಪ್ರಯತ್ನ ಮಾಡಿರುವ ಇವರ ಪ್ರಯತ್ನವನ್ನು ನಾವು ಮೆಚ್ಚಲೇಬೇಕು.



ಶಾಂತಿ, ಸೌಹಾರ್ದತೆ ಹಾಗೂ ಎಲ್ಲರನ್ನೂ ಪ್ರೀತಿಸುವ ಒಂದು ಉತ್ಸವವನ್ನಾಗಿ ರೂಪಿಸಿದ, ಕಳೆದ 18 ವರ್ಷಗಳಿಂದ ಅದನ್ನು ತಪಸ್ಸಿನಂತೆ ನಡೆಸಿಕೊಂಡು ಬಂದ ಮಾಜಿ ಸಚಿವ ರಮಾನಾಥ ರೈ ಅವರ ಗಣೇಶೋತ್ಸವ ಈ ನಾಡಿಗೆ ಉತ್ತಮ ಸಂದೇಶ ಹಾಗೂ ಮಾದರಿಯಾಗಿದೆ. ಆ ಮಾದರಿಯನ್ನು ನಾವೆಲ್ಲರೂ ಅನುಸರಿಸಿದರೆ ಸಮಾಜ, ದೇಶ ಬಲಿಷ್ಠವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article