ರಾಜ್​ ಕುಂದ್ರಾ ಮೊಬೈಲ್​, ಲ್ಯಾಪ್​ಟಾಪ್, ಹಾರ್ಡ್ ಡಿಸ್ಕ್ ಗಳಲ್ಲಿ 119 ಪೋರ್ನ್​ ವೀಡಿಯೋಗಳು ಪತ್ತೆ: ತನಿಖೆ ವೇಳೆ ಬಹಿರಂಗ

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ಕುಂದ್ರಾ ಮೇಲಿನ ಪೋರ್ನ್ ವೀಡಿಯೋ ಚಿತ್ರೀಕರಣ ಪ್ರಕರಣ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದ ವೇಳೆ ಅವರಲ್ಲಿ 119 ಪೋರ್ನ್ ವೀಡಿಯೋಗಳಿದ್ದವೆಂಬ  ಆಘಾತಕಾರಿ ಅಂಶ ಬೆಳಕಿಗೆ ಬಂದಿವೆ.

ಆರೋಪ ಬಂದ ಕೂಡಲೇ ರಾಜ್​ಕುಂದ್ರಾ ಅವರನ್ನು ವಶಪಡಿಸಿಕೊಂಡು ತನಿಖೆ ‌ನಡೆಸಿದ ವೇಳೆ ಅವರ ಮೊಬೈಲ್‌ ಫೋನ್, ಲ್ಯಾಪ್​​ಟಾಪ್, ಹಾರ್ಡ್​ ಡಿಸ್ಕ್​ ಡ್ರೈವ್​ಗಳಲ್ಲಿ 119 ಪೋರ್ನ್​ ವೀಡಿಯೋಗಳನ್ನು ಪೊಲೀಸರು ಪತ್ತೆಹಚ್ಚಿದ್ದರು ಎಂದು ತಿಳಿದು ಬಂದಿದೆ. ರಾಜ್ ಕುಂದ್ರಾ ಈ ವೀಡಿಯೋಗಳನ್ನು ಸುಮಾರು 9 ಕೋಟಿ ರೂ.ಗೆ ಮಾರಾಟ ಮಾಡಲು ಯೋಜನೆ ಹಾಕಿದ್ದರೆಂದು ಮುಂಬೈ ಪೊಲೀಸ್ ಅಪರಾಧ ವಿಭಾಗ ತಿಳಿಸಿದೆ. 

ಅಶ್ಲೀಲ ಚಿತ್ರಗಳ ತಯಾರಿಕೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ರಾಜ್​ ಕುಂದ್ರಾಗೆ ಮುಂಬೈ ಕೋರ್ಟ್‌, 50 ಸಾವಿರ ರೂ. ಮೊತ್ತದ ಶೂರಿಟಿ ಬಾಂಡ್​ ಪಡೆದು ಜಾಮೀನು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಇತ್ತೀಚೆಗೆ ರಾಜ್ ಕುಂದ್ರಾ ವಿರುದ್ಧ 1,400 ಪುಟಗಳ ಚಾರ್ಜ್​​ಶೀಟನ್ನು ನ್ಯಾಯಾಲಯಕ್ಕೆ​ ಸಲ್ಲಿಸಿದ್ದರು. ಅಲ್ಲದೆ ಇದೇ ವಿಚಾರವನ್ನು ಕುರಿತಂತೆ ಅಧಿಕಾರಿಗಳು, ನಟಿ ಶಿಲ್ಪಾಶೆಟ್ಟಿ ಸೇರಿ 43 ಸಾಕ್ಷಿಗಳ ಹೇಳಿಕೆಗಳನ್ನು ಕಲೆ ಹಾಕಿದ್ದಾರೆ.

ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ರಾಜ್​ ಕುಂದ್ರಾ ಜಾಮೀನು ಅರ್ಜಿ ಸಲ್ಲಿಸಿದ್ದು, ಪ್ರಕರಣದಲ್ಲಿ ತನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಜಾಮೀನು ಅರ್ಜಿಯಲ್ಲಿ ಹೇಳಿಕೆ ನೀಡಿದ್ದಾರೆ. ಪೋರ್ನ್ ವೀಡಿಯೋ ಚಿತ್ರೀಕರಣ ಪ್ರಕರಣದಲ್ಲಿ ರಾಜ್​ ಕುಂದ್ರಾ ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಹಾಗಾಗಿ ಜಾಮೀನು ನೀಡುವಂತೆ ಅವರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಆಲಿಸಿರು ನ್ಯಾಯಾಲಯ ನಿನ್ನೆ ರಾಜ್ ಕುಂದ್ರಾಗೆ ಜಾಮೀನು ನೀಡಿದ್ದು, ಇಂದು‌ ಅವರು ಜೈಲಿನಿಂದ ಹೊರ ಬಂದಿದ್ದಾರೆ.

ಪೋರ್ನ್ ವೀಡಿಯೋ ನಿರ್ಮಾಣ ದಂಧೆ ನಡೆಸುತ್ತಿದ್ದಾರೆಂಬ ಆರೋಪದಡಿ ಉದ್ಯಮಿ ರಾಜ್​ ಕುಂದ್ರಾ ಸೇರಿದಂತೆ ನಾಲ್ವರನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಜುಲೈ 19ರಂದು ಬಂಧಿಸಿದ್ದರು.