-->
Application invited - ಯೋಗ ತರಬೇತಿದಾರರ ಹುದ್ದೆಗೆ ಅರ್ಜಿ ಆಹ್ವಾನ

Application invited - ಯೋಗ ತರಬೇತಿದಾರರ ಹುದ್ದೆಗೆ ಅರ್ಜಿ ಆಹ್ವಾನ






ಮಂಗಳೂರು: ಜಿಲ್ಲೆಯ ಆಯುಷ್ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಆಯುಷ್ ವೆಲ್‍ನೆಸ್ ಸೆಂಟರುಗಳಾದ ಮಂಗಳೂರು ತಾಲೂಕಿನ ಕಸಬಾ ಬೆಂಗ್ರೆಯ ಸರ್ಕಾರಿ ಯುನಾನಿ ಚಿಕಿತ್ಸಾಲಯ, ಬೆಳ್ತಂಗಡಿ ತಾಲೂಕಿನ ತಣ್ಣೀರು ಪಂಥದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹಾಗೂ ಮಂಗಳೂರು ತಾಲೂಕಿನ ಕೆರೆಕಾಡು ಸರ್ಕಾರಿ ಯುನಾನಿ ಚಿಕಿತ್ಸಾಲಯಗಳಿಗೆ ತಲಾ ಒಂದು ಹುದ್ದೆಯಂತೆ ಒಟ್ಟು 3 ಯೋಗ ತರಬೇತುದಾರರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಅರ್ಜಿ ಆಹ್ವಾನಿಸಲಾಗಿದೆ.



ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಉತ್ತೀರ್ಣವಾಗಿರಬೇಕು ಹಾಗೂ ಯೋಗ ಸರ್ಟಿಫಿಕೇಷನ್ ಬೋರ್ಡ್‍ನ ಯೋಗ ವೆಲ್‍ನೆಸ್ ಇನ್ಸ್‍ಟ್ರಕ್ಟರ್ ಕೋರ್ಸ್ ಪ್ರಮಾಣ ಪತ್ರ ಅಥವಾ ಯೋಗ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು. ವಯೋಮಿತಿ 21 ರಿಂದ 60 ವರ್ಷಗಳ ಒಳಗಿರಬೇಕು ಮತ್ತು ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು.



ಅರ್ಜಿ ಸಲ್ಲಿಸಲು 2021ರ ಆಗಸ್ಟ್ 8 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಚೇರಿಯ ದೂ.ಸಂಖ್ಯೆ: 0824-2453063 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article