-->

School-college begins after long time | ಶಾಲಾ ಕಾಲೇಜು ಆರಂಭಕ್ಕೆ ಕ್ಷಣಗಣನೆ- ಕೊವಿಡ್ ಎದುರಿಸಲು ಸರ್ಕಾರದ ಸಿದ್ಧತೆ ಹೇಗಿದೆ?

School-college begins after long time | ಶಾಲಾ ಕಾಲೇಜು ಆರಂಭಕ್ಕೆ ಕ್ಷಣಗಣನೆ- ಕೊವಿಡ್ ಎದುರಿಸಲು ಸರ್ಕಾರದ ಸಿದ್ಧತೆ ಹೇಗಿದೆ?




ಒಂದೂವರೆ ವರ್ಷಗಳಿಂದ ಬಾಗಿಲು ಹಾಕಿದ್ದ ಶಾಲಾ ಕಾಲೇಜುಗಳು ಸೋಮವಾರದಿಂದ ತೆರೆಯಲಿದೆ. ಈ ಹಿನ್ನೆಲೆಯಲ್ಲಿ 9, 10 ಮತ್ತು ಪ್ರಥಮ ಪಿಯುಸಿ ಬೌದ್ಧಿಕ ತರಗತಿಗಳ ಪುನಾರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.


ಕೊರೋನಾ ಸೋಂಕು ಪಾಸಿಟಿವಿಟಿ ಪ್ರಮಾಣ ಶೇ. 2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಭೌತಿಕ ತರಗತಿ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಸೋಂಕು ಹರಡದಂತೆ ಎಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸುವ ಮೂಲಕ, ಕೊವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಕೊಂಡು ತರಗತಿ ತೆರೆಯಲು ಅವಕಾಶ ನೀಡಲಾಗಿದೆ.


ವಿದ್ಯಾರ್ಥಿಗಳು ಊಟದ ಬಾಕ್ಸ್, ಬಾಟಲಿಯಲ್ಲಿ ಬಿಸಿ ನೀರು ತೆಗೆದುಕೊಂಡು ಹೋಗಬೇಕು. ಶಾಲೆಯಲ್ಲಿ ಕೂಡ ಬಿಸಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಶಾಲಾ ಆರಂಭದ ಮೊದಲಿಗೆ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಮಾತ್ರವೇ ತರಗತಿಗಳು ನಡೆಯಲಿದೆ. ಆ ಬಳಿಕ ಸ್ಥಿತಿಗತಿಗಳನ್ನು ಗಮನಿಸಿಕೊಂಡು ಪೂರ್ತಿ ತರಗತಿಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.


ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ಕುಸಿತ ಕಂಡರೆ, ಶಾಲೆಗಳಲ್ಲಿ ತರಗತಿಗಳು ಮುಂದುವರಿಯಬಹುದು. ಪಾಸಿಟಿವಿಟಿ ಆಧಾರದಲ್ಲಿ ಶಾಲೆಗಳನ್ನು ತೆರೆಯಲು ಸರ್ಕಾರ ಮುಂದಾಗಿರುವುದು ಉತ್ತಮವಾದ ಕ್ರಮವಾಗಿದೆ. 


ಯಾವ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗುತ್ತದೋ ಆ ಜಿಲ್ಲೆಗಳಲ್ಲಿ ಅಥವಾ ತಾಲೂಕುಗಳಲ್ಲಿ ಮಾತ್ರವೇ ಶಾಲೆ ಮುಚ್ಚಲು ಶಿಕ್ಷಣ ಇಲಾಖೆ ಮುಂದಾಗಬಹುದು ಎಂದು ಹೇಳಲಾಗಿದೆ.


ಕಳೆದ ವರ್ಷಗಳ ಕೊವಿಡ್ 19 ವೈರಸ್‌ನಿಂದ ಉಂಟಾಗಿರುವ ಅನುಭವಗಳನ್ನು ಗಮನಿಸಿಕೊಂಡು ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. 



ಜ್ಞಾನದ ಕೇಂದ್ರವಾದ ಶಾಲೆಗಳನ್ನು ಮುಚ್ಚುವುದು ದಾರಿದ್ರ್ಯದ ಸಂಕೇತವಾಗಿದೆ. ಹಾಗಾಗಿ ಶಾಲೆ ಆರಂಭದ ಬಗ್ಗೆ ರಾಜ್ಯ ಬಿಜೆಪಿ ತೆಗೆದುಕೊಂಡಿರುವ ಕ್ರಮ ಪ್ರಸಂಶನಿಯ ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article