Mixed Vaccine- ಕೋವ್ಯಾಕ್ಸಿನ್, ಕೋವಿಶೀಲ್ಡ್ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿಕೆ

ಕೋವ್ಯಾಕ್ಸಿನ್, ಕೋವಿಶೀಲ್ಡ್ ಮಿಶ್ರಣ ಪರಿಣಾಮಕಾರಿ: ವೈದ್ಯಕೀಯ ಮಂಡಳಿ





ಜನ ಈಗಾಗಲೇ ಲಸಿಕೆಗಾಗಿ ಪರದಾಡುತ್ತಿದ್ದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೊಸ ಹೇಳಿಕೆ ನೀಡುವ ಮೂಲಕ ಜನರನ್ನು ಮತ್ತೆ ಗೊಂದಲಕ್ಕೀಡು ಮಾಡಿದೆ.



ಕೋವ್ಯಾಕ್ಸಿನ್, ಕೋವಿಶೀಲ್ಡ್ ಮಿಶ್ರಣ ಪರಿಣಾಮಕಾರಿ ಫಲಿತಾಂಶ ನೀಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ದೃಢಪಡಿಸಿದೆ.


ಎರಡೂ ಲಸಿಕೆಗಳನ್ನು ಸಮ್ಮಿಶ್ರಣ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂಬುದು ತಮ್ಮ ಸಮೀಕ್ಷೆಗಳಿಂದ ಕಂಡುಬಂದಿದೆ ಎಂದು ಹೇಳಿದ್ದು, 18 ಮಂದಿಗೆ ಲಸಿಕೆ ನೀಡಿದ ಉತ್ತಮ ಫಲಿತಾಂಶ ಪಡೆಯಲಾಗಿದೆ ಎಂದು ಐಸಿಎಂಆರ್ ಪ್ರಕಟಣೆ ತಿಳಿಸಿದೆ.


ಮಿಶ್ರಣ ಲಸಿಕೆ ಹೆಚ್ಚು ಸುರಕ್ಷಿತ ಮತ್ತು ಶಕ್ತಿಶಾಲಿ ಎಂದು ಅದು ಹೇಳಿದೆ.