
Sunil Heggaravalli died- ರಾಜ್ಯದ ಹಿರಿಯ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹೃದಯಾಘಾತಕ್ಕೆ ಬಲಿ!
7/12/2021 07:51:00 AM
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಿಕ್ಕಮಗಳೂರಿನ ಗೋಣಿಬೀಡಿನಲ್ಲಿದ್ದಾಗ ಸೋಮವಾರ(12-07-2021) ಸಂಜೆ ಹೃದಯಾಘಾತವಾಗಿದೆ.
ಹಾಯ್ ಬೆಂಗಳೂರು ಪತ್ರಿಕೆಯ ವರದಿಗಾರರಾಗಿದ್ದ ಸುನೀಲ್ ಹೆಗ್ಗರವಳ್ಳಿ, ಕ್ರೈಂ ಮತ್ತು ಪೊಲಿಟಿಕಲ್ ವರದಿಗಾರಿಕೆಯಲ್ಲಿ ಹೆಸರು ಮಾಡಿದ್ದರು. ಜನಶ್ರೀ ಸುದ್ದಿ ವಾಹಿನಿಗೆ ಕೆಲವು ಕಾಲ ಸಂಪಾದಕರಾಗಿದ್ದರು. ಕ್ರೈಂ ಡೈರಿ ತಂಡದ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.
ಸುಪಾರಿ ಕಿಲ್ಲಿಂಗ್ ಪ್ರಕರಣದಲ್ಲಿ ಪತ್ರಕರ್ತ ರವಿ ಬೆಳಗೆರೆ ವಿರುದ್ಧ ದೂರು ದಾಖಲಿಸಿ, ಜೈಲು ಸೇರುವಂತೆ ಮಾಡಿದ್ದರು.
ನಂತರ ಚಾರ್ಲಿ ಟೈಮ್ಸ್, ಪತ್ರಿಕೆ ಮತ್ತು ರಾಷ್ಟ್ರಕೂಟ ಎಂಬ ಯೂ ಟ್ಯೂಬ್ ಚಾನಲ್ ಮಾಡಿದ್ದರು.
ಉತ್ತಮ ಕ್ರೈಂ ವರದಿಗಾರನಾಗಿ, ಪತ್ರಕರ್ತರಾಗಿ ಹೆಸರು ಮಾಡಿದ್ದ ಸುನೀಲ್ ಹೆಗ್ಗರವಳ್ಳಿ ನಿಧನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ್ ಸಂತಾಪ ಸೂಚಿಸಿದ್ದಾರೆ.