-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Mangaluru Honeytrap - ಮನೆಗೆ ಬಂದು ಪಾರ್ಟಿ ಮಾಡಿ ಹನಿಟ್ರ್ಯಾಪ್: ಮಹಿಳೆ ಸಹಿತ ಇಬ್ಬರ ಅರೆಸ್ಟ್

Mangaluru Honeytrap - ಮನೆಗೆ ಬಂದು ಪಾರ್ಟಿ ಮಾಡಿ ಹನಿಟ್ರ್ಯಾಪ್: ಮಹಿಳೆ ಸಹಿತ ಇಬ್ಬರ ಅರೆಸ್ಟ್





ಮಂಗಳೂರು: ಮನೆಯಲ್ಲಿ ಪಾರ್ಟಿ ಮಾಡೋಣ ಎಂದು ಮನವೊಲಿಸಿ ಮನೆಗೆ ಬಂದು ಯುವಕ ಮತ್ತು ಯುವತಿ ಮನೆ ಮಾಲೀಕನಿಗೆ ಮತ್ತು ಬರಿಸುವ ಜ್ಯೂಸ್ ಕುಡಿಸಿ ಹನಿಟ್ರ್ಯಾಪ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.





ವಿದೇಶದಿಂದ ಆಗಮಿಸಿದ್ದ ವ್ಯಕ್ತಿಯೊಬ್ಬರು ಈ ಹನಿಟ್ರ್ಯಾಪ್‌ಗೆ ಒಳಗಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ಧಾರೆ. ಘಟನೆಗೆ ಸಂಬಂಧಿಸಿದಂತೆ ಹನಿಟ್ರ್ಯಾಪ್‌ ಪ್ರಕರಣದ ಪ್ರಮುಖ ರೂವಾರಿಗಳಾದ 24 ವರ್ಷದ ಅಝ್ವೀನ್ ಸಿ.ಎಂ. (ಮಂಗಳೂರಿನ ತೋಟ ಇಂಫಾಲ ಅಪಾರ್ಟ್‌ಮೆಂಟಿನಲ್ಲಿ ವಾಸ) ಹಾಗೂ ಬೈಕಂಪಾಡಿ ಜೋಕಟ್ಟೆ ನಿವಾಸಿ 23 ವರ್ಷದ ಹತೀಜಮ್ಮ ಆಲಿಯಾಸ್ ಸಪ್ನಾ ಎಂಬವರನ್ನು ಬಂಧಿಸಲಾಗಿದೆ.


ಘಟನೆಯ ವಿವರ:

ದುಬೈನಿಂದ ಉದ್ಯೋಗದಲ್ಲಿ ಇದ್ದು ವಾಪಸ್ ಊರಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದ ಪರಿಚಯದ ಅಝ್ವಿನ್ ಮತ್ತು ಆತನ ಗೆಳತಿ ಹತೀಜಮ್ಮ ಆಲಿಯಾಸ್ ಸಫ್ನಾ ಕಳೆದ ಜುಲೈ 19ರಂದು ಭೇಟಿ ಮಾಡಿ ಪಾರ್ಟಿ ಪಾಡೋಣ ಎಂದು ಮನವೊಲಿಸುತ್ತಾರೆ.



ಅದಕ್ಕೊಪ್ಪಿದ ಮಾಲೀಕರು ಪಾರ್ಟಿ ಆಯೋಜಿಸುತ್ತಾರೆ. ಈ ಪಾರ್ಟಿಯಲ್ಲಿ ಮದ್ಯ ಕುಡಿದ ಬಳಿಕ ಯಾವುದೋ ಅಮಲು ಪದಾರ್ಥ ವನ್ನು ಜ್ಯೂಸ್‌ನೊಂದಿಗೆ ಕುಡಿಸಿ ಮೂರ್ಛೆ ತಪ್ಪಿಸಿದ್ದಾರೆ.

ಆ ಬಳಿಕ ಮನೆ ಮಾಲಕನನ್ನು ವಿವಸ್ತ್ರಗೊಳಿಸಿ ಫೋಟೋ, ವೀಡಿಯೋ ಮಾಡಿಸಿಕೊಂಡಿದ್ದಾರೆ.


 ಅಲ್ಲದೆ, ಮನೆ ಮಾಲೀಕರ ಕೈಯಲ್ಲಿದ್ದ ನವರತ್ನದ ಉಂಗುರ, ಕಪಾಟಿನಲ್ಲಿ ಇದ್ದ ಎರಡು ಲಕ್ಷಕ್ಕೂ ಅಧಿಕ ನಗದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.



ನಂತರ ಬೆಳಿಗ್ಗೆ 7 ಗಂಟೆಗೆ ಅಜ್ವಿನ್ ಮನೆಗೆ ಹೋಗಿ ಪೊಲೀಸ್ ಕಂಪ್ಲೇಂಟ್ ಮಾಡಬೇಡಿ, ನಾಳೆ ಹಣ ಕೊಡುತ್ತೇನೆ ಎಂದು ನಂಬಿಸಿದ್ದಾನೆ.



ಬಳಿಕ, ತಮ್ಮ ಮೊಬೈಲ್ ತೋರಿಸಿ ಮನೆ ಮಾಲೀಕರ ನಗ್ನ ಫೋಟೋ, ವೀಡಿಯೋ ತೋರಿಸಿ ತನ್ನಲ್ಲಿ ಹಣ ಕೇಳಿದರೆ ಅಥವಾ ಪೊಲೀಸರಿಗೆ ದೂರು ನೀಡಿದರೆ ಈ ನಗ್ನ ವೀಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕದ್ದಾನೆ.



ನೀನು ನನ್ನ ತಂಗಿಯ ಬಲಾತ್ಕಾರಕ್ಕೆ ಪ್ರಯತ್ನಿಸಿರುವುದಾಗಿಯೂ ತಂಗಿಯ ಕೈಯಿಂದ ಕೇಸು ಕೊಡಿಸುವುದಾಗಿ ಬೆದರಿಸಿದ್ದಾನೆ.



ಇಂತಹ ಹಲವು ಹನಿಟ್ರ್ಯಾಪ್ ಘಟನೆಗಳು ಮಂಗಳೂರಿನಲ್ಲಿ ಇತ್ತೀಚೆಗೆ ಬೆಳಕಿಗೆ ಬರುತ್ತಿದ್ದು, ಕೆಲವರು ಗೌರವಕ್ಕೆ ಚ್ಯುತಿ ಬರುವ ದೃಷ್ಟಿಯಿಂದ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಧೈರ್ಯ ಮಾಡಿ ದೂರು ನೀಡಿದರೆ, ಅಂತಹ ಮಾಹಿತಿಯನ್ನು ಗೌಪ್ಯವಾಗಿ ಇಟ್ಟುಕೊಂಡು ತನಿಖೆ ನಡೆಸುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭರವಸೆ ನೀಡಿದ್ದಾರೆ. 

Ads on article

Advertise in articles 1

advertising articles 2

Advertise under the article

ಸುರ