-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Church- ಚರ್ಚ್ ಜಾಗದಲ್ಲಿ ಹಿಂದೂ ದಂಪತಿಯ ಅಂತ್ಯಕ್ರಿಯೆ: ಸಹೋದರತೆ ಸಂದೇಶ ಸಾರಿದ ಧರ್ಮಕೇಂದ್ರ

Church- ಚರ್ಚ್ ಜಾಗದಲ್ಲಿ ಹಿಂದೂ ದಂಪತಿಯ ಅಂತ್ಯಕ್ರಿಯೆ: ಸಹೋದರತೆ ಸಂದೇಶ ಸಾರಿದ ಧರ್ಮಕೇಂದ್ರ





ತಿರುವನಂತಪುರಂ: ಹಿಂದೂ ದಂಪತಿಯ ಶವಸಂಸ್ಕಾರ ನೆರವೇರಿಸಲು ಚರ್ಚ್‌ಗೆ ಸೇರಿದ ಜಾಗದಲ್ಲಿ ಅವಕಾಶ ಮಾಡಿಕೊಡುವ ಮೂಲಕ ಕೇರಳದ ಅಲಪ್ಪುಳ ಜಿಲ್ಲೆಯ ಗ್ರಾಮವೊಂದರಲ್ಲಿ ಸೇಂಟ್‌ ಜಾರ್ಜ್‌ ಫೋರೆನ್ಸ್‌ ಚರ್ಚ್ ಭಾವೈಕ್ಯದ ಸಂದೇಶ ಸಾರಿದೆ.


80 ವರ್ಷ ವಯಸ್ಸಿನ ಶ್ರೀನಿವಾಸನ್‌ ಅವರು ಕಳೆದ ತಿಂಗಳು ಕೊವಿಡ್ ನಿಂದ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ಸೇಂಟ್‌ ಜಾರ್ಜ್‌ ಫೋರೆನ್ಸ್‌ ಚರ್ಚ್‌ಗೆ ಸೇರಿದ ಸ್ಮಶಾನದಲ್ಲಿ ನೆರವೇರಿಸಲಾಗಿತ್ತು. 


ಇದರ ಬೆನ್ನಲ್ಲೇ ಶ್ರೀನಿವಾಸ್ ಅವರ ಪತ್ನಿ ಕೃಷ್ಣವೇಣಿ ಅವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯನ್ನು ಕೂಡ ಚರ್ಚ್ ನ ಸ್ಥಳದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ.



ಚರ್ಚ್ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದರೂ, ಹಿಂದೂ ಧರ್ಮದ ವಿಧಿವಿಧಾನದ ಪ್ರಕಾರವೇ ಅಂತ್ಯಕ್ರಿಯೆಗೆ ಚರ್ಚ್ ಅವಕಾಶ ಮಾಡಿಕೊಡುವ ಮೂಲಕ ಇತರ ಧರ್ಮಗಳೊಂದಿಗಿನ ಸೌಹಾರ್ದವನ್ನು ಎತ್ತಿ ಹಿಡಿದೆ.



ದಂಪತಿಗಳಿಗೆ ಸ್ವಂತ ಜಮೀನಿ ಇರಲಿಲ್ಲ. ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ. ಇದರಿಂದಾಗಿ ಎಡತ್ವಾ ಗ್ರಾಪಂ ಚರ್ಚ್ ಗೆ ಮನವಿ ಮಾಡಿದ್ದು, ಚರ್ಚ್ ನವರು ತಕ್ಷಣವೇ ಅಂತ್ಯಕ್ರಿಯೆ ನಡೆಸಲು ಸಮ್ಮತಿ ಸೂಚಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಇನ್ನೂ ಇದೇ ಮೊದಲ ಬಾರಿಗೆ ಚರ್ಚ್ ನ ಸ್ಮಶಾನದಲ್ಲಿ ಇತರ ಧರ್ಮದವರ ಅಂತ್ಯಕ್ರಿಯೆ ನಡೆಸಲಾಗಿದೆ. ಚರ್ಚ್ ನ ಕಾರ್ಯಕ್ಕೆ ಯಾರು ಕೂಡ ಆಕ್ಷೇಪ ವ್ಯಕ್ತಪಡಿಸದೇ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ