-->
Corona Update- ಮೈಸೂರನ್ನು ಮೀರಿಸಿದ ಉಡುಪಿ!- ದ.ಕ.ದಲ್ಲಿ 345 ಕೊರೋನಾ ಪಾಸಿಟಿವ್

Corona Update- ಮೈಸೂರನ್ನು ಮೀರಿಸಿದ ಉಡುಪಿ!- ದ.ಕ.ದಲ್ಲಿ 345 ಕೊರೋನಾ ಪಾಸಿಟಿವ್


ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರವೂ ಕೊರೋನಾ ಸೋಂಕು ಗಣನೀಯ ಸಂಖ್ಯೆಯಲ್ಲಿ ಪತ್ತೆಯಾಗಿದೆ. ಉಡುಪಿಯಂತೂ ಮೈಸೂರನ್ನು ಮೀರಿಸಿ ಕೊರೋನಾ ಸೋಂಕಿತ ಪಟ್ಟಿಯಲ್ಲಿ ಮೇಲೆದ್ದಿದೆ.ರಾಜ್ಯದಲ್ಲಿ ಒಟ್ಟು 1890 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1631 ಮಂದಿ ಕೋವಿಡ್ ಸೋಂಕು ಮುಕ್ತರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶುಕ್ರವಾರ ಒಂದೇ ದಿನ ಒಟ್ಟು 34 ಮಂದಿ ಕೋವಿಡ್‌ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.ದಕ್ಷಿಣ ಕನ್ನಡದಲ್ಲಿ ಗುರುವಾರ 395 ಪ್ರಕರಣಗಳು ದಾಖಲಾಗಿದ್ದರೆ, ಶುಕ್ರವಾರ ಆ ಸಂಖ್ಯೆ 345ಕ್ಕೆ ಬಂದು ನಿಂತಿದೆ. ರಾಜ್ಯದ ಶೇಕಡಾ 18ರಷ್ಟು ಪ್ರಕರಣಗಳು ದಕ್ಷಿಣ ಕನ್ನಡದಲ್ಲಿ ದಾಖಲಾಗಿದ್ದು, ಏಳು ಮಂದಿ ಸಾವನ್ನಪ್ಪಿರುವುದು ಆತಂಕ ಸೃಷ್ಟಿಸಿದೆ.ಬುಧವಾರ ಮೂರು ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದ್ದರೆ, ಬುಧವಾರ ಐದು ಜಿಲ್ಲೆಗಳಲ್ಲಿ ನೂರರ ಗಡಿ ದಾಟಿತ್ತು. ಗುರುವಾರ ಆರು ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶತಕ ದಾಖಲಿಸಿದೆ. ಬೆಂಗಳೂರು ನಗರ ಗರಿಷ್ಠ 426 ಹೊಸ ಪ್ರಕರಣಗಳು, 9 ಸಾವು ದಾಖಲಿಸಿದೆ.ದಕ್ಷಿಣ ಕನ್ನಡದಲ್ಲಿ 345ಕ್ಕೆ ಹೊಸ ಪ್ರಕರಣಗಳು ಕಂಡುಬಂದಿವೆ. 7 ಮಂದಿಯ ಸಾವು ಸಂಭವಿಸಿವೆ. ಇದೇ ವೇಳೆ, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಕೇವಲ 201.ನೆರೆಯ ಉಡುಪಿ, ಹಾಸನ, ಮೈಸೂರು, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.ಉಡುಪಿ ಕೋರೋನಾ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದು, ಮೈಸೂರು ನಾಲ್ಕನೇ ಸ್ಥಾನಕ್ಕೆ ಮತ್ತು ಹಾಸನ ಐದನೇ ಸ್ಥಾನದಲ್ಲಿ ಇದೆ.ಉಡುಪಿ 155, ಹಾಸನ 135, ಮೈಸೂರು 142, ಕೊಡಗು 77 ಮತ್ತು ಚಿಕ್ಕಮಗಳೂರು 88 ಹೊಸ ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿದೆ.ಬುಧವಾರ ಮೂರು ಜಿಲ್ಲೆಗಳಲ್ಲಿ ಕೋರೋನಾ ಶೂನ್ಯ ದಾಖಲೆ ಮಾಡಿತ್ತು. ಆದರೆ, ಗುರುವಾರ ಮತ್ತು ಶುಕ್ರವಾರ ಯಾವುದೇ ಜಿಲ್ಲೆಯಲ್ಲಿ ಶೂನ್ಯ ದಾಖಲೆ ಇಲ್ಲ. ಕೊಪ್ಪಳ, ಯಾದಗೀರ್ ಮತ್ತು ರಾಯಚೂರಿನಲ್ಲಿ ತಲಾ ಒಂದು ಕೋವಿಡ್ ಸೋಂಕು ಪತ್ತೆಯಾಗಿದೆ. ಕೇವಲ 12 ಜಿಲ್ಲೆಗಳಲ್ಲಿ ಒಂದಂಕೆಯ ಕೊರೋನಾ ಕೇಸ್‌ಗಳು ಪತ್ತೆಯಾಗಿವೆ.

Ads on article

Advertise in articles 1

advertising articles 2

Advertise under the article