-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Kinya Gram Panchayat- ಮಂಗಳೂರು: ಕಿನ್ಯಾ ಗ್ರಾಮ ಪಂಚಾಯತ್ನಿಂದ ವಿಶ್ವ ಪರಿಸರ ದಿನಾಚರಣೆ

Kinya Gram Panchayat- ಮಂಗಳೂರು: ಕಿನ್ಯಾ ಗ್ರಾಮ ಪಂಚಾಯತ್ನಿಂದ ವಿಶ್ವ ಪರಿಸರ ದಿನಾಚರಣೆ





ಕಿನ್ಯಾ ಗ್ರಾಮ ಪಂಚಾಯತ್ ಕೋವಿಡ್_19 ರ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.



ಊರಿನ ಪ್ರಮುಖರಾದ ಕುತುಬಿಯಾ ಮದ್ರಸ ಕೇಂದ್ರ ಜುಮಾ ಮಸೀದಿ ಇದರ ಅಧ್ಯಕ್ಷ ಕೆ ಸಿ ಇಸ್ಮಾಯಿಲ್ ಹಾಗೂ ಯಕ್ಷಸಭಾ ಭವನ‌ ದುರ್ಗಾಪುರ ಕಿನ್ಯಾ ದ ಪೋಷಕ ಬಾಬು ಶಾಸ್ತ ಇವರಿಗೆ ಅಧ್ಯಕ್ಷ ರು ಗಿಡಗಳನ್ನು ವಿತರಿಸಿ ಸಾಂಕೇತಿಕ ವಾಗಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.



ಸಾರ್ವಜನಿಕರು ತಮ್ಮ ಮನೆಯ ಮುಂಭಾಗದಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಮನೆಗೊಂದರಂತೆ ಗಿಡ ನೆಡುವ ಕಾರ್ಯಕ್ರಮ ಕ್ಕೆ ಚಾಲನೆ‌ ನೀಡಿದರು .






ಹಾಗೆಯೇ ಈ ಗಿಡಗಳನ್ನು ನಿರಂತರವಾಗಿ ಪೋಷಿಸಿ ಬೆಳೆಸಲು ಸೂಚಿಸಿ ಪರಿಸರದ ಬಗ್ಗೆ ಕಾಳಜಿಯನ್ನು ಬೆಳೆಸುವಂತೆ ವಿನಂತಿ ಮಾಡಿದರು ಮತ್ತು ಮುಂದಿನ ವರ್ಷದ ಅದೇ ದಿನದಂದು ಅಂತಹವರನ್ನು ಗುರುತಿಸಿ ಗೌರವಿಸಲಾಗುವುದೆಂದು ಹೇಳಿದರು. 


ಗ್ರಾಮದ 4 ವಾರ್ಡ್ ನ ಎಲ್ಲಾ ಸದಸ್ಯರ ಮೂಲಕ ಆಯಾ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಿ ಆಯಾ ವಾರ್ಡ್ ಗಳಲ್ಲಿ ಸ್ಪರ್ಧಾತ್ಮಕವಾಗಿ ಪೋಷಿಸುವಂತೆ ಕೋರಲಾಯಿತು.



ಈ ಕಾರ್ಯಕ್ರಮ ದಲ್ಲಿ ಪಂಚಾಯತ್ ಉಪಾಧ್ಯಕ್ಷೆಯಾದ ಮೈಮುನಾ , ಸದಸ್ಯರಾದ ಸಿರಾಜುದ್ದೀನ್, ಮಾಲಿನಿ, ಉಮ್ಮರ್ ಪಾರೂಕ್, ಭಾಗಿ, ನಝೀರ್ ಹುಸೈನ್, ಸಂತೋಷ್ ಕುಮಾರ್ ಮೊಂತೇರೋ, ಶ್ರೀ ಇಸ್ಮಾಯಿಲ್ ಫಯಾಝ್, ಶ್ರೀ ಸಯ್ಯದ್ ತ್ವಾಹ ತಂಗಳ್, ಹಾಗೂ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕ ರು ಉಪಸ್ಥಿತರಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಬಿ ಸ್ವಾಗತಿಸಿ ವಂದನಾರ್ಪಣೆಗೈದರು.

Ads on article

Advertise in articles 1

advertising articles 2

Advertise under the article

ಸುರ