-->

Family suicide due to financial fear- ಕೊರೊನಾ ಭೀತಿ, ಆರ್ಥಿಕ ಸಂಕಷ್ಟ: ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ!

Family suicide due to financial fear- ಕೊರೊನಾ ಭೀತಿ, ಆರ್ಥಿಕ ಸಂಕಷ್ಟ: ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ!







ಕೊರೊನಾ ಸೋಂಕಿನ ಭಯ ಹಾಗೂ ಆರ್ಥಿಕ ಸಂಕಷ್ಟದ ಭೀತಿ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಚಾಮರಾಜನಗರ ಜಿಲ್ಲೆಯ ಮೂಕಹಳ್ಳಿಯಲ್ಲಿ ನಡೆದಿದೆ.



45 ವರ್ಷ ವಯಸ್ಸಿನ ಮಹಾದೇವ ಸ್ವಾಮಿ ಹಾಗೂ ಅವರ ಹೆಂಡತಿ ಮಂಗಳಮ್ಮ ಹಾಗೂ ಮಕ್ಕಳಾದ ಗೀತಾ, ಶೃತಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.



ಪೊಲೀಸ್ ಮಾಹಿತಿಗಳ ಪ್ರಕಾರ, 20 ದಿನಗಳ ಹಿಂದೆಯಷ್ಟೇ ಕುಟುಂಬದ ಯಜಮಾನ ಮಹಾದೇವ ಸ್ವಾಮಿ ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಕ್ವಾರಂಟೈನ್ ಮತ್ತು ಚಿಕಿತ್ಸೆ ಬಳಿಕ ಅವರು ಗುಣಮುಖರಾಗಿದ್ದರು.



ಆದರೆ ಚಿಕಿತ್ಸೆ ಮತ್ತು ಆ ಬಳಿಕ ಅನುಭವಿಸಿದ ತೀವ್ರ ಆರ್ಥಿಕ ಸಮಸ್ಯೆಯಿಂದ ಸಾಮೂಹಿಕ ಆತ್ಮಹತ್ಯೆಗೆ ಕುಟುಂಬ ನಿರ್ಧರಿಸಿದೆ ಎನ್ನಲಾಗಿದೆ. ಇಡೀ ಕುಟುಂಬವೇ ನೇಣಿಗೆ ಶರಣಾಗಿದ್ದು ಮನುಕುಲವೇ ಕಲುಕುವಂತಾಗಿದೆ.



ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗರು ಭೇಟಿ ನೀಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article