ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ ಮತ್ತು ಅವರ ಮಕ್ಕಳಾದ ಸಮಿಶಾ, ವಯಾನ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವಿಷಯವನ್ನು ಶಿಲ್ಪಾ ಶೆಟ್ಟಿ ತನ್ನ ಇನ್ಸ್‌ಟಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಾಜ್ ಕುಂದ್ರಾ ಅವರ ಪೋಷಕರು ಮತ್ತು ಅವರ ಮನೆಯವರೂ ಕೊರೋನಾ ಪಾಸಿಟಿವ್ ಆಗಿದ್ದಾರೆ.
ಮೊದಲಿಗೆ ನನ್ನ ಅತ್ತೆ ಹಾಗೂ ಮಾನವರಿಗೆ ಕೊರೋನಾ ಸೋಂಕು ತಗುಲಿತ್ತು. ಬಳಿಕ ಸಮಿಶಾ, ವಯಾನ್ ರಾಜ್, ನನ್ನ ತಾಯಿ ಮತ್ತು ಕೊನೆಯದಾಗಿ ರಾಜ್ ಕುಂದ್ರಾ ಅವರಿಗೆ ಕೊರೋನಾ ದೃಢಪಟ್ಟಿದೆ ಎಂದು ಅವರು ತಮ್ಮ ಸಂದೇಶದಲ್ಲಿ ಮಾಹಿತಿ ನೀಡಿದ್ದಾರೆ.
ವೈದ್ಯರ ಸಲಹೆ ಪಡೆದು ಹೋಂ ಕ್ವಾರಂಟೈನ್‌ನಲ್ಲಿ ನಾವು ಚಿಕಿತ್ಸೆ ಪಡೆಯುತ್ತಿದ್ದೇವೆ. ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಗಳು ಇವೆ. ಅಭಿಮಾನಿಗಳ ಪ್ರೀತಿ ಹಾಗೂ ಬೆಂಬಲ ನಮಗಿರಲಿ.. ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಎಲ್ಲರೂ ಮಾಸ್ಕ್ ಹಾಕಿ, ಕೈಗಳನ್ನು ಸ್ವಚ್ಛಗೊಳಿಸಿ, ಸುರಕ್ಷಿತರಾಗಿರಿ ಎಂದು ಶಿಲ್ಪಾ ತಮ್ಮ ಅಭಿಮಾನಿಗಳಿಗೆ ವಿನಂತಿ ಮಾಡಿದ್ದಾರೆ.