-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Gokuldas demise- ಕೊರಗ ಸಮುದಾಯದ ಮೊದಲ ಪದವೀಧರ ಪಿ. ಗೋಕುಲದಾಸ್ ಇನ್ನಿಲ್ಲ

Gokuldas demise- ಕೊರಗ ಸಮುದಾಯದ ಮೊದಲ ಪದವೀಧರ ಪಿ. ಗೋಕುಲದಾಸ್ ಇನ್ನಿಲ್ಲ





ಕೊರಗ ಸಮುದಾಯದ ಸ್ಪೂರ್ತಿ ಚೇತನ, ಸಮುದಾಯದ ಮೊತ್ತ ಮೊದಲ ಪದವೀಧರ ಪಳ್ಳಿ ಗೋಕುಲ ದಾಸ್ ಮುಂಜಾನೆ ಮಂಗಳೂರಿನ ಚಿಲಿಂಬಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೂಲತಃ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದವರಾದ ಗೋಕುಲದಾಸರು ಕೊರಗ ಸಮುದಾಯದ ಮೊಟ್ಟ ಮೊದಲ ಪಧವೀದರರಾಗಿದ್ದರು. ಹುಟ್ಟು ಹೋರಾಟಗಾರ, ಅಪ್ರತಿಮ ಸಂಘಟಕ, ತೀಕ್ಷ್ಣ ಮಾತುಗಾರ, ಬರಹಗಾರ, ಕ್ರಾಂತಿ ಕವಿ, ಅದಕ್ಕೂ ಮಿಗಿಲಾಗಿ ಒಬ್ಬ ಮಾನವತವಾದಿಯಾಗಿದ್ದರು.

ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಗೋಕುಲದಾಸರು ನಿವೃತ್ತಿ ಜೀವನವನ್ನು ಮಂಗಳೂರಿನ ಚಿಲಿಂಬಿಯ ತಮ್ಮ ಸ್ವಗೃಹದಲ್ಲಿ ಸಾಗಿಸುತ್ತಿದ್ದರು. ತಮ್ಮ ಇಳಿ ವಯಸ್ಸಿನಲ್ಲಿಯೂ ಕೊರಗ ಸಮುದಾಯದ ಸಂಘಟನೆ ಮತ್ತು ಅಭಿವೃದ್ಧಿಗಾಗಿ ದುಡಿಯುತ್ತಿದ್ದ ಇವರು, 'ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ'ದ ಗೌರವಾಧ್ಯಕ್ಷರು. ಅಲ್ಲದೆ ಸಮುದಾಯದ ಸ್ಪೂರ್ತಿ ಚಿಲುಮೆಯಾಗಿದ್ದರು.



ಮುನೀರ್ ಸಂತಾಪ

ತುಳುನಾಡಿನ ಮೂಲ ನಿವಾಸಿ, ಅಳಿವಿನಂಚಿಗೆ ಜಾರುತ್ತಿರುವ, ಅಸ್ಪೃಶ್ಯತೆಯ ಕರಾಳತೆಗೆ ಅತಿ ಹೆಚ್ಚು ತುತ್ತಾದ ಕೊರಗ ಸಮುದಾಯದ ಮೊಟ್ಟ ಮೊದಲ ಪದವೀಧರ, ಕೊರಗ ಸಂಘಟನೆಯ ನಾಯಕ, ಹೋರಾಟಗಾರರಾದ ಗೋಕುಲ್ ದಾಸ್ ಇಂದು ನಮ್ಮನ್ನಗಲಿದ್ದಾರೆ.


dyfi ಸಂಘಟನೆಯು ಅಗಲಿದ ಹಿರಿಯ ಚೇತನಕ್ಕೆ ಶ್ರದ್ದಾಂಜಲಿ ಸಲ್ಲಿಸುತ್ತದೆ. ಕೊರಗ ಸಮುದಾಯದ ಪರವಾದ ಅವರ ಹೋರಾಟ, ಬದ್ದತೆಯನ್ನು ಸದಾ ನೆನಪಿಸಿಕೊಳ್ಳುತ್ತದೆ ಎಂದು ಡಿವೈಎಫ್‌ಐ ನಾಯಕ ಮುನೀರ್ ಕಾಟಿಪಳ್ಳ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ