-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
dirty politics in Nelamangala | ಮರಣದಲ್ಲೂ ರಾಜಕೀಯ: ಸಾವಿನ ಮನೆಯಲ್ಲೂ ಅನುಕಂಪ ಗಿಟ್ಟಿಸಿದ ರಾಜಕಾರಣಿಗಳು!

dirty politics in Nelamangala | ಮರಣದಲ್ಲೂ ರಾಜಕೀಯ: ಸಾವಿನ ಮನೆಯಲ್ಲೂ ಅನುಕಂಪ ಗಿಟ್ಟಿಸಿದ ರಾಜಕಾರಣಿಗಳು!





ಕೋವಿಡ್ 19 ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಸಾವಿನ ರುದ್ರ ನರ್ತನವಾಗುತ್ತಿದೆ. ಎಲ್ಲೆಲ್ಲೂ ಸಾವು ನೋವು ಮನುಕುಲವನ್ನೇ ಕಲುಕುವಂತಾಗಿದೆ.


ಇಷ್ಟೆಲ್ಲ ಸಾವು ಸಂಕಟಗಳು ನಡೆಯುತ್ತಿದ್ದರೂ ಬೆಂಗಳೂರು ಗ್ರಾಮಾಂತರದಲ್ಲಿ ಬೃಹತ್ ಬ್ಯಾನರೊಂದು ರಾಜಕಾರಣಿಗಳ ಕೀಳು ರಾಜಕೀಯ ಹಾಗೂ ಪ್ರಚಾರಪ್ರಿಯತೆಯನ್ನು ಅನಾವರಣಗೊಳಿಸಿದೆ.


ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರವನ್ನು ಒಳಗೊಂಡ ಈ ಬೃಹತ್ ಬ್ಯಾನರ್ ಗಿಡ್ಡೇನಹಳ್ಳಿಗೆ ಹೋಗುವ ದಾರಿಯನ್ನು ಸೂಚಿಸುತ್ತಿದೆ. ಕೋವಿಡ್ ನಿಂದ ಮೃತಪಟ್ಟವರ ಉಚಿತ ಅಂತ್ಯಸಂಸ್ಕಾರ ಎಂಬುದನ್ನೂ ಹೇಳುತ್ತಿದೆ.



ಅಲ್ಲದೆ, ಜಿಲ್ಲಾಡಳಿತದ ವತಿಯಿಂದ ಸರ್ಕಾರಿ ಗೌರವಗಳೊಂದಿಗೆ ನಡೆಯುವ ಅಂತ್ಯ ಸಂಸ್ಕಾರದಲ್ಲಿ ಇವರು ಉಚಿತವಾಗಿ ನೀರು, ಕಾಫಿ, ಟೀ, ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಿ ಅದಕ್ಕೆ ದೊಡ್ಡ ಪ್ರಚಾರ ಪಡೆದು ಜನರ ಎದೆಯಲ್ಲಿ ದೊಡ್ಡ ಸ್ಥಾನ ಗಿಟ್ಟಿಸಲು ಮುಂದಾಗಿದ್ದಾರೆ.

ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಮಾರ್ಗದರ್ಶನ ಹಾಗೂ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಯ್ಯ ಅವರ ನೇತೃತ್ವದಲ್ಲಿ ವ್ಯವಸ್ಥೆ ನಡೆದಿದೆ ಎಂಬ ಪ್ರಚಾರ ಬೇರೆ...





ಈ ಬ್ಯಾನರ್‌ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಸಾವಿನ ದುಃಖದಲ್ಲಿ ಇರುವ ಜನರಿಗೆ ಉಚಿತ ನೀರು, ಟೀ-ಕಾಫಿ ಕೊಟ್ಟು ಜನಸೇವೆ ಮಾಡುವ ಇವರು ಈ ರೀತಿ ಕೀಳು ಮಟ್ಟದ ಅಪಪ್ರಚಾರ ನಡೆಸಿರುವುದು ಸರಿಯಲ್ಲ ಎಂಬ ಮಾತು ನೆಟ್ಟಿಗರಲ್ಲಿ ಕೇಳಿಬಂದಿದೆ.

Ads on article

Advertise in articles 1

advertising articles 2

Advertise under the article

ಸುರ