ರಾಜ್ಯದ ಜನರಿಗೆ ಒಂದು ಸಿಹಿ ಸುದ್ದಿ ಶೀಘ್ರದಲ್ಲೇ ಸಿಗಲಿದೆ. ರಾಜ್ಯದಲ್ಲಿ ಮೇ 24ರ ಬಳಿಕ ಲಾಕ್ ಡೌನ್ ವಿಸ್ತರಣೆ ಆಗುವ ಸಾಧ್ಯತೆ ಇದೆ. ಇದೇ ವೇಳೆ, ರಾಜ್ಯದ ಜನರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ.
ನೆರೆ ರಾಜ್ಯ ಕೇರಳದ ಮಾದರಿಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ವಿಶೇಷ ಫುಡ್ ಕಿಟ್ ಪ್ಯಾಕೇಜ್ ನೀಡುವ ಸಾಧ್ಯತೆ ಇದೆ.
ಏನಿದು ಕೇರಳ ಮಾದರಿಯ ಫುಡ್ ಕಿಟ್ ಪ್ಯಾಕೇಜ್..?
ಲಾಕ್ ಡೌನ್ ಹಿನ್ನೆಲೆಯಲ್ಲಿ ದುಡಿಯುವ ಕೈಗಳಿಗೆ ಆದಾಯ ಇಲ್ಲದ ಸಂತ್ರಸ್ತ ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸಾಮಗ್ರಿಗಳನ್ನು ನೀಡುವ ಫುಡ್ ಕಿಟ್ ಇದಾಗಿದೆ.
ಈಗಾಗಲೇ ಮೇ ತಿಂಗಳಿನಲ್ಲಿ ಕೇರಳದ 85 ಲಕ್ಷ ಕುಟುಂಬಗಳಿಗೆ ಸಾರ್ವಜನಿಕ ವಿತರಣ ವ್ಯವಸ್ಥೆ (ರೇಷನ್ ಅಂಗಡಿಗಳ) ಮೂಲಕ ಈ ಕಿಟ್ ವಿತರಿಸಲಾಗಿದೆ.
ಅಕ್ಕಿ ಸೇರಿದಂತೆ ಎಲ್ಲ ದಿನಸಿ ವಸ್ತುಗಳನ್ನು ಉಚಿತವಾಗಿ ನೀಡಿರುವ ಕೇರಳ ಸರ್ಕಾರದ ಹೆಗ್ಗಳಿಕೆ. ಕೋವಿಡ್ ಬಿಕ್ಕಟ್ಟನ್ನು ಕಠಿಣ ಲಾಕ್‌ಡೌನ್ ಹಾಗೂ ಸರ್ಕಾರದ ಪ್ಯಾಕೇಜ್ ಮೂಲಕ ಗೆದ್ದು ಬರಬೇಕು ಎನ್ನುವುದು ಸಾರ್ವಜನಿಕರ ಮೂಲ ಮಂತ್ರ.
ಜೂನ್ ತಿಂಗಳಲ್ಲೂ ಎರಡನೇ ಕಂತಿನ ಫುಡ್ ಕಿಟ್ ಪ್ಯಾಕೇಜ್ ನೀಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ.
