
sharan under police custody | ಕೊಲೆಗೆ ಸಂಚು: ಆಕಾಶಭವನ ಶರಣ್ ಪೊಲೀಸ್ ಕಸ್ಟಡಿಗೆ
4/23/2021 10:43:00 PM
ಕುಖ್ಯಾತ ರೌಡಿಶೀಟರ್ ಆಕಾಶಭವನ ಶರಣ್‌ನನ್ನು ಮಂಗಳೂರು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಆರೋಪಿ ಶರಣ್ ದರೋಡೆ ನಡೆಸಿ ಕೊಲೆಗೆ ಸಂಚು ರೂಪಿಸಿದ್ದ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಮಾರ್ಚ್ 17ರಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ದರೋಡೆ ಪ್ರಕರಣಗಳಿಗೆ ಸಂಬಂಧಿಸಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಬಂಧಿತರ ಪೈಕಿ ರೌಡಿಶೀಟರ್ ಚಂದ್ರಹಾಸ ಪೂಜಾರಿ ತನಿಖೆ ವೇಳೆ ಶರಣ್ ಕೊಲೆ ನಡೆಸಿ ಡಾನ್ ಆಗಲು ಸಂಚು ರೂಪಿಸಿರುವ ಬಗ್ಗೆ ಮಾಹಿತಿ ನೀಡಿದ್ದ.
ಇದರ ಆಧಾರದ ಮೇಲೆ ಪೊಲೀಸರು ಶರಣ್‌ನನ್ನು ಒಂದು ವಾರದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.