ಮಂಗಳೂರು ಸೇರಿದಂತೆ ರಾಜ್ಯದ ಕರಾವಳಿಯಲ್ಲಿ ರಮಜಾನ್ ಉಪವಾಸ ಆಚರಣೆ ಇಂದಿನಿಂದ ಆರಂಭವಾಗಿದೆ. ಕೇರಳದ ಕೋಯಿಕೋಡ್‌ನಲ್ಲಿ ಪ್ರಥಮ ಚಂದ್ರದರ್ಶನ ಆದ ಹಿನ್ನೆಲೆಯಲ್ಲಿ ಪವಿತ್ರ ರಮ್ಜಾನ್ ಶುರುವಾಗಿದೆ ಎಂದು ಘೋಷಿಸಲಾಗಿದೆ.
ದಕ್ಷಿಣ ಕನನ್ಡ ಜಿಲ್ಲಾ ಖಾಝಿ ಅಲ್ ಹಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲಾ ಸಂಯುಕ್ತ ಖಾಯಿ ಝೈನುಲ್ ಉಲಮಾ ಎಂ. ಅಬ್ದುಲ್ ಮುಸ್ಲಿಯಾರ್ ಮಾಣಿ ಇವರ ಪರವಾಗಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾತ್ ಅಧ್ಯಕ್ಷ ಪಿ. ಅಬೂಬಕ್ಕರ್ ನೇಜಾರು ಮತ್ತು ಕಾರ್ಯದರ್ಶಿ ಎಂ.ಎ. ಬಾಪು ಮೂಳೂರು ತಿಳಿಸಿದ್ದಾರೆ.