-->

Master Flowers creates record in decoration | ಕುಂಜಾಡಿ ಧರ್ಮನೇಮದಲ್ಲಿ ಆಕರ್ಷಣೆಯ ಕೇಂದ್ರವಾದ ಹೂವಿನ ಅಲಂಕಾರ: ಶೃಂಗಾರಕ್ಕೆ ಮೆರುಗು ನೀಡಿದ ಫಕೀರಬ್ಬ

Master Flowers creates record in decoration | ಕುಂಜಾಡಿ ಧರ್ಮನೇಮದಲ್ಲಿ ಆಕರ್ಷಣೆಯ ಕೇಂದ್ರವಾದ ಹೂವಿನ ಅಲಂಕಾರ: ಶೃಂಗಾರಕ್ಕೆ ಮೆರುಗು ನೀಡಿದ ಫಕೀರಬ್ಬ














ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ಧರ್ಮನೇಮ ಯಶಸ್ವಿಯಾಗಿ ನಡೆಯಿತು. ಎಲ್ಲರೂ ಧಾರ್ಮಿಕ ಕಾರ್ಯಕ್ರಮದ ಅದ್ದೂರಿತನವನ್ನು ಬಾಯಿತುಂಬಾ ಕೊಂಡಾಡಿದರು.


ಹೂವಿನ ಅಲಂಕಾರವೂ ಚಿತ್ತಾಕರ್ಷಕವಾಗಿತ್ತು. ಸುಮಾರು ಮೂರು ದಿನಗಳ ಕಾಲ ನಡೆದ ವಿವಿಧ ದೈವಾರಾಧನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಸ್ವಲ್ಪವೂ ಲೋಪ ಬರದಂತೆ ಈ ಹೂವಿನ ಅಲಂಕಾರವನ್ನು ಮಾಡಿದ್ದು ಮಂಗಳೂರಿನ ಹೂವಿನ ವ್ಯಾಪಾರಿ ಮಾಸ್ಟರ್ ಫ್ಲವರ್ ಫಕೀರಬ್ಬ.


ಹೌದು, ಅವರೇ ಮಾಸ್ಟರ್ ಫ್ಲವರ್ ಫಕೀರಬ್ಬ. ಬೆಳ್ತಂಗಡಿಯ ಮರೋಡಿ ನಿವಾಸಿಯಾಗಿರುವ ಫಕೀರಬ್ಬ ಕಳೆದ ಮೂರು ದಶಕಗಳಿಂದ ಮಂಗಳೂರಿನಲ್ಲಿ ಹೂವಿನ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ.


ಫಕೀರಬ್ಬ ಅವರಿಗೂ ನಳಿನ್ ಅವರಿಗೂ ನಿಕಟ ಸ್ನೇಹ. ಕಳೆದ ಬಾರಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿ ಪಟ್ಟ ಅಲಂಕರಿಸಿದಾಗ ಲಕ್ಷಾಂತರ ಮೌಲ್ಯದ ಉಡುಪಿ ಮಲ್ಲಿಗೆಯನ್ನು ಮಂಗಳೂರಿನ ಜನರಿಗೆ ಹಂಚಿ ಸಂಭ್ರಮ ಪಟ್ಟವರು ಫಕೀರಬ್ಬ.


ಕಾರ್ಕಳದ ಭಗವಾನ್ ಬಾಹುಬಲಿಗೆ ನಡೆದ ಮಹಾಮಸ್ತಕಾಬಿಷೇಕದಲ್ಲಿ ದಾಖಲೆ ಗಾತ್ರದ ಹೂವಿನ ಮಾಲೆ ಮಾಡಿ ದೇವರಿಗೆ ಅರ್ಪಿಸಿ ಎಲ್ಲರ ಗಮನ ಸೆಳೆದಿದ್ದರು.


ಅಲ್ಲದೆ ಧರ್ಮಸ್ಥಳದ ಮಹಾಮಸ್ತಾಕಾಭಿಷೇಕದಲ್ಲೂ ಹೂವಿನ ಅಲಂಕಾರದ ಜವಾಬ್ದಾರಿಯನ್ನು ಇವರೇ ವಹಿಸಿದ್ದರು.


ಎಲ್ಲಕ್ಕಿಂತ ಮಿಗಿಲಾಗಿ, ವಿಶ್ವಪ್ರಸಿದ್ಧ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇದ ಸಂದರ್ಭದಲ್ಲಿ ಸುಮಾರು ಒಂದು ತಿಂಗಳ ಕಾಲ ದಾಖಲೆ ಗಾತ್ರದ ಮಹಾಮೂರ್ತಿಯನ್ನು ಹೂವಿನ ಅಲಂಕಾರದಿಂದ ಸಿಂಗರಿಸಿದ್ದಲ್ಲದೆ, ಮಹಾಮಸ್ತಕಾಭಿಷೇಕಕ್ಕೆ ವಿಶೇಷ ಮೆರುಗು ಬರುವಂತೆ ಹೂವಿನ ಶೃಂಗಾರ ಮಾಡಿ ಎಲ್ಲರಿಂದಲೂ ಪ್ರಶಂಸೆ ಗಿಟ್ಟಿಸಿಕೊಂಡಿದ್ದರು.


ನಳಿನ್ ಅವರ ಕುಟುಂಬದ ಧರ್ಮನೇಮದಲ್ಲಿ ಹೂವಿನ ಅಲಂಕಾರ ಮಾಡಿ ಸೌಹಾರ್ದತೆಯನ್ನೂ ಮೆರೆದು ಫಕೀರಬ್ಬ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article