ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎಂದರೆ ಜಿಲ್ಲಾಡಳಿತದ ಕೇಂದ್ರ. ಇಲ್ಲಿ ಎಲ್ಲ ಮಾಹಿತಿಯೂ ಲಭ್ಯ. ಸಾರ್ವಜನಿಕರಿಗೆ ಎಲ್ಲ ಸೇವೆಯೂ ಲಭ್ಯ ಎಂಬ ಮಾಹಿತಿ ಸಾಮಾನ್ಯ ಜನರದ್ದು.
ಆದರೆ, ದಕ್ಷಿಣ ಕನ್ನಡ ದಲ್ಲಿ ಮಾತ್ರ ವ್ಯತಿರಿಕ್ತ. ಇಲ್ಲಿ ಹೇಳೋರಿಲ್ಲ... ಕೇಳೋರಿಲ್ಲ. ಲಾಕ್ ಡೌನ್ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಸಾಮಾಜಿಕ ಕಾರ್ಯಕರ್ತರಾದ ಜೆರಾಲ್ಡ್ ಟವರ್ ಇಲ್ಲಿನ ಅವಸ್ಥೆ ಕಂಡು ದಂಗಾಗಿದ್ದಾರೆ.
ತಮ್ಮ ಭೇಟಿ ಬಗ್ಗೆ ಅವರೇ ವಿವರ ನೀಡಿದ್ದಾರೆ.
"ನಿನ್ನೆ ಸುಮಾರು ಮಧ್ಯಾಹ್ನದ ಸಮಯಕ್ಕೆ ನಮ್ಮ ರಾಜ್ಯ ಸರ್ಕಾರ ಒಂದು ಅವೈಜ್ಞಾನಿಕ ಲಾಕ್ ಡೌನ್ ನಿರ್ಧಾರ ಕೈಗೊಂಡಿದೆ.
ನಾನು ಇಂದು ಬೆಳಿಗ್ಗೆ ಸಾರ್ವಜನಿಕರ ಪರವಾಗಿ ಕೆಲವು ಮಾಹಿತಿ ಪಡೆಯಲು DC ಕಛೇರಿಗೆ ಹೋದೆ. ಸಮಾರು 11-15 ಆದರೂ, ಅಲ್ಲಿ DC ಇಲ್ಲ, ಅವರ PA ಇಲ್ಲ, ವಿಶೇಷ ಎಂದರೆ, AC ಮತ್ತು ಅವರ PA ಕೂಡಾ ಕಛೇರಿಯಲ್ಲಿ ಇಲ್ಲ.
ಜನರು ನಾಳೆಗೆ EMERGENCY- ಗಾಗಿ ಹೊರ ಹೋಗಲು, ಪಾಸ್-ಗಳಿಗಾಗಿ ಪೋಲೀಸ್ ಠಾಣೆಗಳಿಗೆ ಸುತ್ತಾಡಿ ಇಲ್ಲಿ ಬಂದಿರುವಾಗ, ಪಾಸ್ ಬಿಡಿ, ಸರಿಯಾದ ಮಾಹಿತಿ ಕೊಡಲೂ ಅಲ್ಲಿ ಯಾರಿಲ್ಲ.
ಕಡೆಗೆ, ಒಂದು ಮಹಿಳಾ CLERK ನಮಗೆ ಸರ್ಕಾರ ಯಾವುದೇ ಪಾಸ್ ಕೊಡುವ ಹುಕುಮ್ ಕೊಟ್ಟಿಲ್ಲ. ನಮಗೆ CIRCULAR ರಾತ್ರಿ 9-30 ಕ್ಕೆ ಬಂದಿದೆ, ಜನಸಾಮಾನ್ಯರು ತಮ್ಮಲ್ಲಿ ಈಗಿರುವ VISITING CARD, ಕಂಪೆನಿಯಲ್ಲಿ ಕೆಲಸ ಮಾಡುವ ದಾಖಲೆ, ID CARD, ಆಸ್ಪತ್ರೆಯ ನಿಮ್ಮ ಅಥವಾ ರೋಗಿಯ ಯಾವುದಾದರು ದಾಖಲೆಗಳನ್ನು ಉಪಯೋಗಿಸಿ ಲಾಕ್ಡೌನ್ ಸಮಯದಲ್ಲಿ ಹೊರಗೆ ಹೋಗ ಬಹುದು ಎಂದು UNOFFICIAL ಮಾಹಿತಿ ನೀಡಿದ್ದಾರೆ.
ನೀವು, ಮಾಧ್ಯಮ ಮಿತ್ರರು ಕೂಡಲೇ ಜಿಲ್ಲಾಡಳಿತವನ್ನು ಪ್ರಶ್ನಿಸಿ ಎಲ್ಲಾ ನಾಗರಿಕರಿಗೆ ಸರಿಯಾದ ಮಾಹಿತಿ ನಿಮ್ಮ ನಿಮ್ಮ ಮಾಧ್ಯಮ ಮುಖಾಂತರ ಸಿಗುವಂತೆ ಮಾಡಿ ಪುಣ್ಯ ಪಡಕೊಳ್ಳಿ ಎಂದು ಕೈ ಜೋಡಿಸಿ ಬೇಡಿಕೊಳ್ಳುತ್ತೇನೆ"
ಇತಿ ನಿಮ್ಮ ವಿಶ್ವಾಸಿ
ಜೆರಾರ್ಡ್ ಟವರ್ಸ್
ಸಾಮಾಜಿಕ ಹೋರಾಟಗಾರ. ಮಂಗಳೂರು.
9243306531
